

ಬೆಳಗಾವಿ: ರಾಷ್ಟ್ರೀಯ ವೈದ್ಯಕೀಯ ಮಂಡಳಿಯು ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣಕ್ಕಾಗಿ ಅಧ್ಯಾಪಕರ ತರಬೇತಿ ಕಾರ್ಯಕ್ರಮವನ್ನು ‘ವೈದ್ಯಕೀಯ ಶಿಕ್ಷಣದ ಬೇಸಿಕ್ ಕೋರ್ಸ್’ (ಬಿಸಿಎಂಇ) ಎಂದು ಪರಿಷ್ಕರಿಸಿದೆ. ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾದ 24 ವೈದ್ಯಕೀಯ ಕಾಲೇಜುಗಳ ಅಧ್ಯಾಪಕರಿಗೆ ಜೆಎನ್‌ಎಂಸಿಯಲ್ಲಿ ಕಾರ್ಯಾಗಾರ ಆಯೋಜಿಸಿದ್ದಕ್ಕಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ತಂಡ ಅಭಿನಂದನಾರ್ಹ ಎಂದು ಜೆ.ಎನ್.ವೈದ್ಯಕೀಯ ಕಾಲೇಜಿನ ಉಪ ಪ್ರಾಚಾರ್ಯ ಡಾ. ರಾಜೇಶ್ ಪೊವಾರ ಹೇಳಿದರು.
ಬೆಳಗಾವಿಯ ಜೆ.ಎನ್. ವೈದ್ಯಕೀಯ ಕಾಲೇಜಿನಲ್ಲಿ ಕೆಎಎಚ್‌ಇಆರ್‌ನ ವೈದ್ಯಕೀಯ ಶಿಕ್ಷಣದ ಬೇಸಿಕ್ ಕೋರ್ಸ್ (ಬಿಸಿಎಂಇ) ಕುರಿತು ಆಯೋಜಿಸಿರುವ ಕಾರ್ಯಾಗಾರ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
2023ರ ಎನ್‌ಎಂಸಿ ನಿಯಮಗಳ ಪ್ರಕಾರ ಪದವಿಪೂರ್ವ ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣದ ಕಾರ್ಯಾಗಾರದಲ್ಲಿ ವಿವಿಧ ಬೋಧನೆ-ಕಲಿಕೆಯ ವಿಧಾನ ಮತ್ತು ವೌಲ್ಯಮಾಪನ ತತ್ತ್ವ ಚರ್ಚಿಸಲಾಗುವುದು ಎಂದರು.
ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ವಿವಿಧ ವಿಶೇಷ 30 ಅಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಡಾ.ಪದ್ಮಜಾ ವಾಳ್ವೇಕರ, ಡಾ.ಸುನೀತಾ ಪಾಟೀಲ, ಡಾ.ಜ್ಯೋತಿ ನಾಗಮೋತಿ, ಡಾ.ಜಯಶೀಲಾ ಬಾಗಿ, ಡಾ.ಶೀತಲ್ ಹರಕುಣಿ, ಡಾ.ನಯನಾ ಹಾಶೀಲಕರ್, ಡಾ.ಎಸ್.ಕೆ. ಸೈದಾಪುರ, ಡಾ.ಭಾಗ್ಯಶ್ರೀ ಹುನಗುಂದ, ಡಾ. ಶೀತಲ ಪಟ್ಟಣಶೆಟ್ಟಿ, ಡಾ. ಅನುಪಮಾ ಗುಡಡೆಪ್ಪನವರ, ಡಾ.ಶಮಾ ಬೆಲ್ಲದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಬಿಸಿಎಂಇ ಸಹ ಸಂಚಾಲಕಿ ಮತ್ತು ಉಸ್ತುವಾರಿ ಡಾ.ದೀಪ್ತಿ ಕಡೆಯಂಗಡಿ, ಎಂಇಯು ಸಂಯೋಜಕಿ ಡಾ. ಭಾಗ್ಯಶ್ರೀ ಹುನಗುಂದ ಸ್ವಾಗತಿಸಿದರು. ಸಂಯೋಜಕಿ ಡಾ.ರೂಪಾ ಬೆಲ್ಲದ ವೈದ್ಯಕೀಯ ಶಿಕ್ಷಣದಲ್ಲಿ ಅಡ್ವಾನ್ಸ್ ಕೋರ್ಸ್ ಬಗ್ಗೆ ವಿವರಿಸಿದರು. ಡಾ. ಶಿಲ್ಪಾ ಭೀಮಳ್ಳಿ ನಿರೂಪಿಸಿದರು.