ರೇಬೀಸ್ ಮುಕ್ತ ಸಮಾಜ ಕುರಿತು ಕಾರ್ಯಾಗಾರ

karyagara
Published on

ಮಡಿಕೇರಿ: ರೇಬೀಸ್ ದಿನಾಚರಣೆಯ ಅಂಗವಾಗಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ ಒನ್ ಹೆಲ್ತ್ ಪರಿಕಲ್ಪನೆಯಡಿಯಲ್ಲಿ ರೇಬೀಸ್ ಮುಕ್ತ ಸಮಾಜ ಎಂಬ ವಿಷಯದ ಮೇಲೆ ಕಾರ್ಯಾಗಾರ ನಗರದ ಹೊರ ವಲಯದಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮವನ್ನು ಪಶುವೈದ್ಯಕೀಯ ಆರೋಗ್ಯ ಕ್ಷೇತ್ರದ ತಜ್ಞ ಡಾ.ಶ್ರೀಕೃಷ್ಣ ಇಶ್ಲೂರ್ ಉದ್ಘಾಟಿಸಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ.ಎ.ಜೆ.ಲೋಕೇಶ್ ಮತ್ತು ಡಿ.ಹೆಚ್.ಒ ಡಾ.ಕೆ.ಎಂ.ಸತೀಶ್ ಕುಮಾರ್ ಉಪಸ್ಥಿತಿಯಲ್ಲಿ, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಡಾ.ರಾಮಚಂದ್ರ ಕಾಮತ್, ಡಾ.ನರಸಿಂಹ ರೈ, ಡಾ.ಶಿವಣ್ಣ, ಜಂಟಿ ನಿರ್ದೇಶಕರು ಎಎಚ್‌ವಿಎಸ್ ಡಾ.ಶಾಮಪ್ಪಣ್ಣ, ಐಎಮ್‌ಎ ಕೊಡಗು, ಮತ್ತು ರವೀಂದ್ರ ರೈ ಇಂಡಿಯನ್ ರೆಡ್ ಕ್ರಾಸ್, ಇತರ ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪದವಿ ಪೂರ್ವ ವಿದ್ಯಾರ್ಥಿಗಳಿಗೆ ರೇಬೀಸ್ ಕುರಿತು ರಾಜ್ಯ ಮಟ್ಟದ ರಸಪ್ರಶ್ನೆ ನಡೆಸಲಾಯಿತು ಮತ್ತು ನಗದು ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನವನ್ನು ಬಿ.ಜಿ.ಎಸ್ ಗ್ಲೊಬಲ್ ಇನ್ಸ್ಟಿಟ್ಯುಟ್ ಆಫ್ ಮೆಡಿಕಲ್ ಸೈನ್ಸಸ್, ದ್ವಿತಿಯ ಬಹುಮಾನ ಪಶು ವೈದ್ಯಕೀಯ ಕಾಲೇಜು ಹಾಸನ, ಹಾಗೂ ತೃತಿಯ ಬಹುಮಾನ ಕೆಎಮ್‌ಸಿ ಮಣಿಪಾಲ್ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮನುಷ್ಯ ಮತ್ತು ಪಶು ಆರೋಗ್ಯ ತಜ್ಞರು ಒನ್ ಹೆಲ್ತ್ ಪರಿಕಲ್ಪನೆಯ ಮಹತ್ವ, ರೇಬೀಸ್‌ನ ತಡೆಗಟ್ಟುವ ಕ್ರಮಗಳು, ಲಸಿಕಾ ವಿಧಾನಗಳು ಹಾಗೂ ಮಾನವ-ಪಶು ಆರೋಗ್ಯ ಕ್ಷೇತ್ರಗಳ ಸಂಯುಕ್ತ ಕಾರ್ಯಪದ್ಧತಿ ಕುರಿತು ಉಪನ್ಯಾಸ ನೀಡಿದರು. ವೈದ್ಯಕೀಯ ಮತ್ತು ಪಶುವೈದ್ಯಕೀಯ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net