28ರಂದು ಸುಧಾರಿತ ಕೃಷಿ ಕುರಿತ ಕಾರ್ಯಾಗಾರ

Agriculture
Agriculture
Published on

ಮೈಸೂರು: ನಗರ ಹೊರವಲಯದ ಹುಯಿಲಾಳು ಗ್ರಾಮ ವ್ಯಾಪ್ತಿಯಲ್ಲಿನ ಬನವಾಸಿ ಎಂಬ ತೋಟದಲ್ಲಿ ಜ.28ರಂದು ಕೃಷಿಕರು ಹಾಗೂ ವಿದ್ಯಾರ್ಥಿಗಳಿಗಾಗಿ ‘ಸುಧಾರಿತ ಕೃಷಿ’ ಕುರಿತ ಒಂದು ದಿನ ಎಂಬ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಪ್ರಗತಿಪರ ಕೃಷಿಕ ಟಿ.ಜಿ.ಎಸ್.ಅವಿನಾಶ್ ತಿಳಿಸಿದರು.

ಜಾಗತಿಕ ಕೃಷಿಯಲ್ಲಿ ಏರುತ್ತಿರುವ ತಾಪಮಾನದಿಂದ ಹಾಗೂ ಹವಾಮಾನ ಬದಲಾವಣೆಗೆ ಅನುಗುಣವಾಗಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೀಗಾಗಿ ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು, ಗೊಬ್ಬರ ಅವಶ್ಯಕತೆಯಿದೆ. ಭೂಮಿಯ ಸತ್ವ ಹೇಗೆ ಹೆಚ್ಚಿಸಬಹುದು, ಪ್ರತಿ ತಿಂಗಳು ಒಂದು ಎಕರೆಯಲ್ಲಿ ಕನಿಷ್ಠ ಹತ್ತು ಸಾವಿರ ಆದಾಯ ತರುವ ಬೆಳೆ, ನಾಟಿ ಹಸುಗಳು ಇಲ್ಲದೆಯೇ ಜೀವಾಣುಗಳ ಸಂಖ್ಯೆ ವೃದ್ಧಿಸುವ ವಿಧಾನ, ಮರ ಗಿಡಗಳಿಗೆ ಅಗತ್ಯವಾಗಿರುವ ಪೋಷಕಾಂಶ, ಆಹಾರ ವನ, ಹಣ್ಣಿನ ತೋಟ, ಡ್ರೈಫ್ರೂಟ್ಸ್ ಮಾದರಿ, ತೆಂಗು-ಅಡಿಕೆ ಮಾದರಿ, ಭತ್ತ, ಕಬ್ಬಿನ ಮಾದರಿ ಮೊದಲಾದ ಮಾಹಿತಿ ನೀಡಲಾಗುವುದು.

ಕಾರ್ಯಾಗಾರದಲ್ಲಿ ಭಾಗಿಯಾಗಲು ಯಾವುದೇ ನೋಂದಣಿ ಶುಲ್ಕವಿಲ್ಲ. ಆದರೆ, ಇಚ್ಛೆಪಟ್ಟಲ್ಲಿ ದೇಣಿಗೆ ನೀಡಬಹುದು. ಹೆಚ್ಚಿನ ಮಾಹಿತಿಗೆ ದೂ.81978 56132ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿಕ ಮೋಹನ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net