ಮಾನಸಿಕ ಆರೋಗ್ಯದ ಆರೈಕೆಯು ನ್ಯಾಯಸಮ್ಮತವಾಗಿರಲಿ

8 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಾನಸಿಕ ಆರೋಗ್ಯದ ಆರೈಕೆಯು ನ್ಯಾಯಸಮ್ಮತವಾಗಿರಬೇಕು. ಭಾವನೆಗಳು ಮತ್ತು ಮಾನಸಿಕ ಆರೋಗ್ಯ ಸ್ಥಿತಿಯ ವ್ಯತ್ಯಾಸವನ್ನು ಗುರುತಿಸಿ ಸೂಕ್ಷ÷್ಮ ಚಿಕಿತ್ಸೆ ನೀಡಬೇಕು ಎಂದು ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರತ್ನಮಾಲಾ ಎಂ. ದೇಸಾಯಿ ಹೇಳಿದರು.

ನಗರದ ಸತ್ತೂರಿನ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಮನೋರೋಗ ಚಿಕಿತ್ಸಾ ವಿಭಾಗದಿಂದ `ವಿಧಿವಿಜ್ಞಾನ ಮನೋವೈದ್ಯಶಾಸ್ತç' ಧ್ಯೆಯಯೊಂದಿಗೆ ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಎಸ್‌ಡಿಎಂ ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕ ಸಾಕೇತ್ ಶೆಟ್ಟಿ ಹಾಗೂ ಗದಗ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಮನೋರೋಗ ವಿಭಾಗದ ಮುಖ್ಯಸ್ಥ ಡಾ. ಸೋಮಶೇಖರ ಬಿಜ್ಜಳ ಕಾರ್ಯಾಗಾರ ಉದ್ಘಾಟಿಸಿದರು.

ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್. ಮತ್ತು ಪ್ರೊ. ಕ್ಲೆಮೆಂಟ್ ಚೆಲ್ಲಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕಿರಣ ಹೆಗ್ಡೆ, ಉಪ ಪ್ರಾಚಾರ್ಯ ಡಾ. ದೀಪಕ ಕಣಬೂರ ಉಪಸ್ಥಿತರಿದ್ದರು.

ರಾಜ್ಯದ ಸುಮಾರು 100ಕ್ಕೂ ಹೆಚ್ಚು ತಜ್ಞ ಮನೋವೈದ್ಯರು ಮತ್ತು ಸ್ನಾತಕೋತ್ತರ ಪದವೀಧರರು ಭಾಗಿಯಾಗಿದ್ದರು. ಡಿಮ್ಹಾನ್ಸ್ ಪ್ರಾಧ್ಯಾಪಕ ಡಾ. ರಾಘವೇಂದ್ರ ನಾಯಕ ಮತ್ತು ಡಾ. ರಂಗನಾಥ ಕುಲಕರ್ಣಿ, ಬೆಂಗಳೂರು ನಿಮ್ಹಾನ್ಸ್ನ ಜೀರಿಯಾಟಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿಜಯಕುಮಾರ ಹೇರ್ಬಿಶೆಟ್ಟರ್ ಹಾಗೂ ಮಕ್ಕಳ ಮನೋರೋಗ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ರಾಜೇಂದ್ರ ಕೆ.ಎಂ. ಉಪನ್ಯಾಸ ನೀಡಿದರು.

ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಅಭಯ್ ಮಟ್ಕರ ಸ್ವಾಗತಿಸಿದರು. ಡಾ. ನವ್ಯತಾ ಮತ್ತು ಡಾ. ಯಶಸ್ವಿ ನಿರೂಪಿಸಿದರು. ಸಂಘಟನಾ ಸಮಿತಿಯ ಕಾರ್ಯದರ್ಶಿ ಡಾ. ನೈದಿಲ ಜೈನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net