ತೆಂಗು ಬೆಳೆ ವಿಸ್ತರಣೆಗೆ ಕಾರ್ಯಾಗಾರ

KDR coconut
ಕಡೂರು ತಾಲೂಕಿನ ಪುರ ಗ್ರಾಪಂನಲ್ಲಿ ತೋಟಗಾರಿಕೆ ಇಲಾಖೆಯಿಂದ ತೆಂಗು ಬೆಳೆ ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನ ಕಾರ್ಯಾಗಾರ ನಡೆಸಲಾಯಿತು. ತೋಟಗಾರಿಕೆ ಸಹಾಯಕ ನಿರ್ದೇಶಕ ಕೆ.ಪಿ.ಜಯದೇವ್, ಸುಮಾ, ಈಶ್ವರಪ್ಪ, ಪ್ರಕಾಶ್, ಅಶೋಕ್, ಮಂಜಪ್ಪ ಇತರರಿದ್ದರು.
Published on

ಕಡೂರು: ತೆಂಗು ಬೆಳೆ ಕ್ಷೇತ್ರ ವಿಸ್ತರಿಸುವ ಮುನ್ನ ಬೆಳೆಗಾರರು ಹಲವಾರು ವಿಷಯಗಳನ್ನು ಗಮನಿಸುವ ಅಗತ್ಯವಿದೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಪಿ.ಜಯದೇವ್ ತಿಳಿಸಿದರು.

ಪುರ ಗ್ರಾಪಂನಲ್ಲಿ ತೆಂಗು ಬೆಳೆಗಾರರೊಂದಿಗೆ ಶುಕ್ರವಾರ ತೆಂಗು ಅಭಿವೃದ್ಧಿ ಮಂಡಳಿ ಮೂಲಕ ತೆಂಗು ಬೆಳೆ ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನ, ಕೀಟ ನಿಯಂತ್ರಣ ತಂತ್ರಜ್ಞಾನದ ಕುರಿತು ತೋಟಗಾರಿಕಾ ಇಲಾಖೆಯಿಂದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರ, ಪಿ.ಕೋಡಿಹಳ್ಳಿ, ದೊಣ್ಣೆಕೋರನಹಳ್ಳಿ, ಹಿರೇಗರ್ಜೆ, ರಾಂಪುರ, ಪಿ.ಮಲ್ಲಾಪುರ ಮತ್ತು ಲಕ್ಷ್ಮೀಪುರ ಗ್ರಾಮಗಳನ್ನು ಗುಚ್ಛ ಗ್ರಾಮಗಳೆಂದು ಆಯ್ಕೆ ಮಾಡಿ, ತೆಂಗು ಬೆಳೆ ಉತ್ಪಾದನಾ ಹೆಚ್ಚಳ ಮತ್ತಿತರ ಅಗತ್ಯ ಮಾರ್ಗದರ್ಶನ ನೀಡಲು ಶಾಸಕ ಕೆ.ಎಸ್.ಆನಂದ್ ಸೂಚಿಸಿದ್ದಾರೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದು. 1974 ಫಲಾನುಭವಿಗಳಿಗೆ ಇದರ ಪ್ರಯೋಜನ ದೊರೆಯಲಿದೆ. ರೈತರು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಇಲಾಖೆಗೆ ಸಲ್ಲಿಸಬೇಕು ಎಂದರು.
ಪುರ ಗ್ರಾಪಂ ಅಧ್ಯಕ್ಷೆ ಜಿ.ಸುಮಾ, ಉಪಾಧ್ಯಕ್ಷ ಈಶ್ವರಪ್ಪ, ಸದಸ್ಯರಾದ ಪ್ರಕಾಶ್, ಅಶೋಕ್, ಮಂಜಪ್ಪ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net