ಮಕ್ಕಳಿಗಾಗಿ ಅಭಿನಯ ಅಭಿವ್ಯಕ್ತಿ ಕಾರ್ಯಾಗಾರ

Published on

ಹುಬ್ಬಳ್ಳಿ: ಇಲ್ಲಿಯ ಸುನಿಧಿ ಕಲಾ ಸೌರಭ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಕ್ಕಳಿಗಾಗಿ ಅಭಿನಯ ಕಾರ್ಯಾಗಾರ "ಅಭಿನಯ ಅಭಿವ್ಯಕ್ತಿ'ಯನ್ನು ಸೆ. 18ರಿಂದ ಒಂದು ವಾರದವರೆಗೆ ತಾಲೂಕಿನ ಸುತಗಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಕಾರ್ಯಾಗಾರ ಉದ್ಘಾಟಿಸುವರು.

ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅಧ್ಯಕ್ಷತೆ ವಹಿಸುವರು. ರಂಗ ತಜ್ಞರು, ಶಿಕ್ಷಣ ಪ್ರೇಮಿಗಳು ಭಾಗವಹಿಸುವರು ಎಂದು ಕಾರ್ಯಾಗಾರದ ಸಂಚಾಲಕಿ ವೀಣಾ ಅಠವಲೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net