ಕಾರ್ಯಾಗಾರ 9ರಂದು

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾಪೋಷಕ ಸಂಸ್ಥೆಯಿಂದ 2024-25ನೇ ಶೈಕ್ಷಣಿಕ ಸಾಲಿನಲ್ಲಿ ವೈದ್ಯಕಿಯ ವಿಭಾಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನೀಟ್​ ಕೌನ್ಸೆಲಿಂಗ್​ ಪೂರ್ವ ತಯಾರಿ ಕುರಿತು ಆ. 9ರಂದು ಬೆಳಗ್ಗೆ 11 ಗಂಟೆಗೆ ಆನ್​ಲೈನ್​ ಮೂಲಕ ಉಚಿತ ಕಾರ್ಯಾಗಾರ ಆಯೋಜಿಸಿದೆ.
ಕಾರ್ಯಾಗಾರಕ್ಕೆ ಪ್ರವೀಣ ಸಪರೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಎಂಬಿಬಿಎಸ್​, ಬಿಎಎಂಎಸ್​, ಬಿಎಚ್​ಎಂಎಸ್​, ಯುನಾನಿ ಮೆಡಿಸನ್ಸ್​, ವೆಟರ್ನರಿ ಸೈನ್ಸ್​, ಇತರ ಕೋರ್ಸ್​ಗಳ ಮಾಹಿತಿ, ಕಟ್​ಆಫ್ ಹಾಗೂ ಸೀಟ್​ ಆಯ್ಕೆ ಕುರಿತು ಮಾಹಿತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಸ್ಥೆ ಸಂಪಕಿರ್ಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net