ವಿಸ್ತಾರಗೊಂಡಿದೆ ಮಂಡ್ಯ ಬೆಲ್ಲದ ಮಾರಾಟ: ಜಂಟಿ ಕೃಷಿ ನಿರ್ದೇಶಕ ಅಶೋಕ್ ಹೇಳಿಕೆ

25_08_Mdy_03(Sanmana)
Published on

ಮಂಡ್ಯ: ಮಂಡ್ಯ ಬೆಲ್ಲದ ವಾರಾಟ ಎಲ್ಲೆಡೆ ವಿಸ್ತಾರಗೊಂಡಿದೆ. ಅದೇ ರೀತಿ ಎಲ್ಲ ಉತ್ಪನ್ನಗಳಿಗೂ ಉತ್ತಮ ಬೆಲೆ ಬರುವಂತಾಗಬೇಕು. ಈ ನಿಟ್ಟಿನಲ್ಲಿ ಉತ್ಪಾದಕರು ಪ್ರಯತ್ನ ವಾಡಬೇಕು ಎಂದು ಜಂಟಿಕೃಷಿ ನಿರ್ದೇಶಕ ಅಶೋಕ್ ತಿಳಿಸಿದರು.
ನಗರದ ಕೃಷಿ ಉತ್ಪನ್ನ ವಾರುಕಟ್ಟೆ ಸಮಿತಿ ಆವರಣದಲ್ಲಿ ಕೆಪೆಕ್ ಬೆಂಗಳೂರು, ತಾಲೂಕು ಕಬ್ಬಿನ ಗಾಣದ ವಾಲೀಕರ ಸಂದ ವತಿಯಿಂದ ಬುಧವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಕುರಿತು ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಾಗಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ವಾತನಾಡಿದರು.
ಮಂಡ್ಯ ಬೆಲ್ಲ ಉತ್ಪಾದನೆ ಮತ್ತು ವಾರಾಟದಲ್ಲಿ ಯಶಸ್ಸು ಕಾಣುತ್ತಿದ್ದೇವೆ. ಸಾವಾನ್ಯವಾಗಿ ಮನೆಗಳ ಪಕ್ಕದಲ್ಲೇ ಇರುವ ಅಂಗಡಿಗಳಲ್ಲೇ ಬೆಲ್ಲ ವಾರಾಟ ವಾಡುತ್ತಿದ್ದರೂ, ಅದನ್ನು ಗ್ರಾಹಕರು ಕೊಳ್ಳುವುದಿಲ್ಲ. ಬದಲಿಗೆ ಟೆಂಪೋಗಳಲ್ಲಿ ಮಂಡ್ಯ ಬೆಲ್ಲ ಎಂದು ಕೂಗಿಕೊಂಡು ಬಂದರೆ ಅದಕ್ಕೆ ಮುಗಿಬಿದ್ದು ತಮಗಿಷ್ಟ ಬಂದಷ್ಟು ಖರೀದಿ ವಾಡಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಇದೇ ವಾದರಿಯಲ್ಲಿ ಎಲ್ಲ ಉತ್ಪನ್ನಗಳಿಗೂ ಬೆಲೆ ಬರುವಂತಾಗಬೇಕು ಎಂದು ಹೇಳಿದರು.
ಮಲೆಬೆನ್ನೂರಿನ ಅಕ್ಕಿಗೆ ಉತ್ತಮ ಬೇಡಿಕೆ ಇದೆ. ಮಂಡ್ಯ ಅಕ್ಕಿ, ಮಂಡ್ಯ ರಾಗಿಗೆ ವಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ. ಕ್ವಿಂಟಾಲ್ ರಾಗಿಗೆ 2,500 ರಿಂದ 3 ಸಾವಿರ ರೂಗೆ ವಾರಾಟ ವಾಡಲಾಗುತ್ತಿದೆ. ಇದನ್ನು ಬಿಟ್ಟು ಉತ್ತಮ ಗುಣಮಟ್ಟದ ರಾಗಿಯನ್ನು ಪ್ಯಾಕೆಟ್ ವಾಡಿ ಬೆಂಗಳೂರಿನಲ್ಲಿ ವಾರಾಟ ವಾಡಿದರೆ ಕೆಜಿಗೆ 60 ರೂ ಸಿಗುತ್ತದೆ. ರಾಗಿ ಹಿಟ್ಟು ವಾಡಿ ವಾರಾಟ ವಾಡಿದರೆ ಅದಕ್ಕೆ 70 ರಿಂದ 75 ರೂ. ಸಿಗಲಿದೆ. ಅಮೆರಿಕಾದಲ್ಲಿ ಒಂದು ಕೆ.ಜಿ. ರಾಗಿಗೆ 300 ರೂ.ಗೆ ವಾರಾಟ ವಾಡಲಾಗುತ್ತದೆ. ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್. ವೆಂಕಟೇಶ್ ಸವಾರಂಭ ಉದ್ಘಾಟಿಸಿದರು. ಜಿಲ್ಲಾ ವಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎಂ.ಪಿ. ದೀಪಕ್, ಆಹಾರ ಸಂಸ್ಕರಣೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ.ಬೆಟ್ಟಸ್ವಾಮಿ, ಬ್ಯಾಂಕ್ ಆಫ್ ಇಂಡಿಯಾ ಕ್ಷೇತ್ರ ವ್ಯವಸ್ಥಾಪಕ ಆರ್.ಮನು ಇತರರಿದ್ದರು.
ಇದೇ ವೇಳೆ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ.ಎಂ.ವಿ.ವೆಂಕಟೇಶ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಎ.ಬಿ.ಬಸವರಾಜು, ಮೈಸೂರು ಜಂಟಿ ಕೃಷಿ ನಿರ್ದೇಶಕ ಡಾ. ಟಿ.ಎಸ್. ಚಂದ್ರಶೇಖರ್, ನಿವೃತ್ತ ಪ್ರಾಧ್ಯಾಪಕ ಸ್ವಾಮಿಗೌಡ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಮುರುಳೇಶ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net