ಕಲಾವಿದರ ಬೆಳವಣಿಗೆಗೆ ಕಾರ್ಯಾಗಾರ ಮುಖ್ಯ

3 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಸ್ತ್ರೀಯ ನೃತ್ಯ ಕಲೆಗಳು ಗುರುಮುಖೇನ ಕಲಿಯುವ ಕಲೆಗಳಾಗಿದ್ದು, ಅದರಲ್ಲಿ ನಾವೀನ್ಯತೆ ತರಲು ಬೇರೆ ಬೇರೆ ಭಾಗದ ನುರಿತ ಹಿರಿಯ ನೃತ್ಯ ಗುರುಗಳಿಂದ ಕಾರ್ಯಾಗಾರ ಏರ್ಪಡಿಸುವುದು ಅಗತ್ಯ. ಇದರಿಂದ ಕಲಾವಿರ ಬೆಳವಣಿಗೆಯಲ್ಲಿ ಹೊಸತನ ಕಾಣಬಹುದು ಎಂದು ಶ್ರೀ ಕುಮಾರೇಶ್ವರ ಕಲ್ಚರಲ್​ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ ಅಭಿಪ್ರಾಯಪಟ್ಟರು.
ಇಲ್ಲಿನ ಗಾಂಧಿನಗರ ಹಲಗಣೇಶ ಸಭಾಭವನದಲ್ಲಿ ರತಿಕಾ ನೃತ್ಯ ನಿಕೇತನ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ನೃತ್ಯಾವಲೋಕನ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರತಿಕಾ ನೃತ್ಯ ನಿಕೇತನದ ವಿದುಷಿ ನಾಗರತ್ನ ಹಡಗಲಿ ಮಾತನಾಡಿ, ನೃತ್ಯ ವಿದ್ಯಾಥಿರ್ಗಳಿಗೆ ಮೂರು ದಿನದ ನೃತ್ಯಾವಲೋಕನ ಕಾರ್ಯಾಗಾರ ಏರ್ಪಡಿಸಿದ್ದು ಅಭಿನಂದನಾರ್ಹ. ಇಂತಹ ಕಾರ್ಯಾಗಾರಗಳು ವಿದ್ಯಾಥಿರ್ಗಳಿಗೆ ಅತ್ಯವಶ್ಯಕ ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ವಿದ್ವಾನ್​ ಡಾ. ಸಾಗರ್​ ಟಿ.ಎಸ್​. ಮಾತನಾಡಿ, ಅವಲೋಕನ, ದೈಹಿಕ ಮತೆ ಮತ್ತು ಗುರುಗಳ ಮೇಲೆ ನಂಬಿಕೆ, ಕಲಿಯುವಿಕೆಯಲ್ಲಿ ಶ್ರದ್ಧೆಯು ಕಲಾವಿದರ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಅಲ್ಲದೆ ಕಲಿತ ವಿದ್ಯೆಯನ್ನು ವೇದಿಕೆ ಮೇಲೆ ಪ್ರದಶಿರ್ಸಿದಾಗ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದರೆ ಅದುವೇ ಕಲಾಗುರುಗಳಿಗೆ ದೊಡ್ಡ ಪ್ರಶಸ್ತಿ ಎಂದರು.
ಸಾಕಾರ ಸಂಸ್ಥೆ ಕಾರ್ಯಾಧ್ಯೆ ಡಾ. ಶುಭದಾ ಮಾತನಾಡಿ, ಕಲಿಕೆ ನಿರಂತರವಾಗಿರಬೇಕು. ಕಾರ್ಯಾಗಾರದಲ್ಲಿ ಕಲಿತದ್ದನ್ನು ಅವಿರತವಾಗಿ ಅಭ್ಯಾಸ ಮಾಡಿ ಕರಗತ ಮಾಡಿಕೊಂಡಾಗ ನೃತ್ಯ ಪ್ರದರ್ಶನ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾಥಿರ್ಗಳು ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ನಂತರ ವಿದ್ವಾನ ಡಾ.ಸಾಗರ ಟಿ.ಎಸ್​. ಅವರಿಂದ ಮನಮೋಹಕ ನೃತ್ಯ ಕಾರ್ಯಕ್ರಮ ಜರುಗಿತು. ತುಮಕೂರಿನ ವಿದುಷಿ ರತಿಕಾ ಸಾಗರ, ಹುಬ್ಬಳ್ಳಿಯ ವಿದುಷಿ ಶೃತಿ ಕಟ್ಟಿ, ರಂಜನಾ ಕಾಮತ, ಧಾರವಾಡ, ಹುಬ್ಬಳ್ಳಿಯ ವಿದ್ಯಾಥಿರ್ಗಳು, ಪಾಲಕರು, ಇತರರು ಇದ್ದರು.
ವಿದುಷಿ ನಾಗರತ್ನ ಹಡಗಲಿ ಸ್ವಾಗತಿಸಿದರು. ಸುನೀಲ ಕುಲಕಣಿರ್ ನಿರೂಪಿಸಿದರು. ಸೃಷ್ಟಿ ಕುಲಕಣಿರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net