ಸಕ್ರಿ ಕಾನೂನು ಕಾಲೇಜಿನಲ್ಲಿ ಕಾರ್ಯಾಗಾರ

DSC_8524-2.jpg
Published on

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ನಿಯೋಜಿತ ಒಂದು ದಿನದ ಕಾರ್ಯಾಗಾರವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.

ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ರೂಪಾ ಇಂಗಳಹಳ್ಳಿ, ವಿದ್ಯಾಥಿರ್ಗಳು ಮುಂಬರುವ ದಿನಗಳಲ್ಲಿ ಒಬ್ಬ ಉತ್ತಮ ನ್ಯಾಯವಾದಿಯಾಗಿ ಹೊರಹೊಮ್ಮಬೇಕಾದರೆ ವ್ಯಕ್ತಿತ್ವವನ್ನು ವಿಕಸಿತಗೊಳಿಸಲೇಬೇಕು. ಒಳ್ಳೆಯ ವಾಕ್ ಕೌಶಲ, ಆತ್ಮಸ್ಥೆರ್ಯ, ಸ್ಥಿರತೆ ಮುಂತಾದವುಗಳನ್ನು ಇಂತಹ ಕಾರ್ಯಾಗಾರಗಳ ಮೂಲಕ ವೃದ್ಧಿಸಿಕೊಳ್ಳಬೇಕು ಎಂದರು.

ತಾಂತ್ರಿಕ ಅಧಿವೇಶನದಲ್ಲಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಇಮ್ಯೂಕೊಲೆಟ್ ಒರ್ಯಾಕಲ್ ಸಂಸ್ಥಾಪಕ ಆರೋಗ್ಯಸ್ವಾಮಿ ಕರಡಿ, ವಿದ್ಯಾರ್ಥಿಗಳು ಸ್ವಯಂ ಅರಿವಿನೊಂದಿಗೆ ಆತ್ಮವಿಶ್ವಾಸ, ಸಾಮಾಜಿಕ ಕಳಕಳಿ, ಆಕರ್ಷಕ ವ್ಯಕ್ತಿತ್ವ ಇವುಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.

ಟ್ರೇನರ್ ಸುಪ್ರೀಯಾ ಜಾಧವ್, ವಿದ್ಯಾರ್ಥಿಗಳು ಸಹನಶೀಲತೆ ಮತ್ತು ಧೈರ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಪ್ರೊ. ದೀಪಾ ಪಾಟೀಲ, ಸುರೇಶ ಲಿಂಬಿಕಾಯಿ, ಶೈಲಜಾ ಹಗೇದಾಳ, ಸತೀಶ ಸಿ.ವಿ., ಸುರೇಶ ಲಮಾಣಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗೌರಮ್ಮ ಹೊಸಮನಿ ಪ್ರಾರ್ಥನೆ ಹಾಡಿದರು. ಪ್ರೊ. ಪೂರ್ಣಿಮಾ ಕುರ್ಡಿಕೇರಿ ನಿರೂಪಿಸಿದರು. ಸುಧಾ ಸಾಲಿಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net