ರಾಯಚೂರಿನಲ್ಲಿ ಕಾರ್ಯಾಗಾರ ಸೆ.14ರಂದು

Amresh kalluru
ಅಮರೇಶ ಕಲ್ಲೂರು
Published on

ಲಿಂಗಸುಗೂರು: ರಾಜ್ಯ ಸರ್ಕಾರದಿಂದ ಸೆ.22ರಿಂದ ಜಾತಿ ಜನಗಣತಿ ಸಮೀಕ್ಷೆ ನಡೆಯಲಿದ್ದು, ಹಿಂದುಳಿದ ವರ್ಗದವರಿಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಸೆ.14ರಂದು ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದ ಆಡಿಟೋರಿಯಂ ಹಾಲ್‌ನಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಖಜಾಂಚಿ ಅಮರೇಶ ಕಲ್ಲೂರು ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಾಗಾರದಲ್ಲಿ ಜನಗಣತಿ ಮಹತ್ವ ಕುರಿತು ಲೇಖಕ ಎ.ನಾರಾಯಣ, ಶೋಷಿತ ಸಮುದಾಯದವರು ಸಾಗಬೇಕಾದ ಹಾದಿ ಕುರಿತು ನಿವೃತ್ತ ಪ್ರಾಧ್ಯಾಪಕ ಕೆ.ಕೃಷ್ಣಪ್ಪ, ಕರ್ನಾಟಕ ಸರ್ವ ಸಮುದಾಯಗಳ ಸಾಮಾಜಿಕ ನ್ಯಾಯ ಸಂರಕ್ಷಣಾ ಅಭಿಯಾನ ಕುರಿತು ಸಣ್ಣಬಸ್ಸಪ್ಪ ಅವರು ಸಮಗ್ರ ಮಾಹಿತಿ ನೀಡಲಿದ್ದಾರೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಎಲ್.ಅತೀಕ್, ಸಂಸದ ಜಿ.ಕುಮಾರ ನಾಯಕ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ಭಾಗವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಹಿಂದುಳಿದ ವರ್ಗಗಳ ಮುಖಂಡರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು. ಪ್ರಮುಖರಾದ ಪರಮೇಶ ಯಾದವ, ನರಸಿಂಹ, ವೆಂಕೋಬ ಪವಾಡಿ, ಮಲ್ಲಿಕಾರ್ಜುನ ಕ್ಯಾಮಾ, ವಿನೋದ ಟಂಕಸಾಲಿ, ಚಿದಾನಂದಪ್ಪ, ವೀರಭದ್ರಪ್ಪ ಗುತ್ತೇದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net