ಪತ್ರಿಕಾ ಛಾಯಾಗ್ರಾಹಕರಿಗೆ ಕಾರ್ಯಾಗಾರ ಮಾ. 23ಕ್ಕೆ

New PJ New
Published on

ಹುಬ್ಬಳ್ಳಿ : ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಾ. 23 ರಂದು ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಪತ್ರಿಕಾ ಛಾಯಾಗ್ರಹಣ ಕುರಿತು "ೋಕಸ್​ ಆನ್​ ನ್ಯೂಸ್​' ಕಾರ್ಯಾಗಾರವನ್ನು ಆಯೋಜಿಸಿದೆ.

ಇದರೊಂದಿಗೆ ಅಕಾಡೆಮಿಯು ಆಯೋಜಿಸಿದ್ದ ಮೊದಲ ಪತ್ರಿಕಾ ಛಾಯಾಗ್ರಹಣ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

ಛಾಯಾಚಿತ್ರ ಪ್ರದರ್ಶನವು ಮಾ. 23 ಹಾಗೂ 24 ರಂದು ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಉದ್ಘಾಟಿಸುವರು. ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್​ ಅವರು ಅಕಾಡೆಮಿಯ ಪತ್ರಿಕಾ ಛಾಯಾಗ್ರಹಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪತ್ರಿಕಾ ಛಾಯಾಗ್ರಾಹಕಿ ಶಿಪ್ರಾ ದಾಸ್​ ಪ್ರಧಾನ ಭಾಷಣ ಮಾಡುವರು.

ಈ ಸಂದರ್ಭದಲ್ಲಿ "ಪತ್ರಿಕಾ ಛಾಯಾಗ್ರಹಣದ ಪ್ರಸಕ್ತ ಸ್ವರೂಪ ಮತ್ತು ಸವಾಲುಗಳ" ಕುರಿತು ಗೋಷ್ಠಿ ನಡೆಯಲಿದ್ದು, ಪತ್ರಿಕಾ ಛಾಯಾಗ್ರಾಹಕರಾದ ಶಿಪ್ರಾ ದಾಸ್​, ಭಾನು ಪ್ರಕಾಶಶ ಚಂದ್ರ, ವಿಶ್ವನಾಥ ಸುವರ್ಣ ಹಾಗೂ ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ಸಿದ್ದಣ್ಣವರ, ಬಂಡು ಕುಲಕಣಿರ್ ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಭಾಗವಹಿಸುವರು ಎಂದು ಅಕಾಡೆಮಿ ಅಧ್ಯೆ ಆಯೇಶಾ ಖಾನಂ ತಿಳಿಸಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿಯು ಮೊದಲ ಬಾರಿಗೆ ಪತ್ರಿಕಾ ಛಾಯಾಗ್ರಾಹಕರಿಗಾಗಿ ಸುದ್ದಿ ಛಾಯಾಗ್ರಹಣ ಸ್ಪರ್ಧೆ ಏರ್ಪಡಿಸಿತ್ತು. ಇದರಲ್ಲಿ ರಾಜ್ಯಾದ್ಯಂತ 60 ಕ್ಕೂ ಹೆಚ್ಚು ಛಾಯಾಗ್ರಾಹಕರು ಭಾಗವಹಿಸಿದ್ದರು. ಅವರ ಛಾಯಾಚಿತ್ರಗಳನ್ನು ಕಾರ್ಯಕ್ರಮದ ದಿನ ಪ್ರದಶಿರ್ಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net