

ಇಂಡಿ: ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಒಡಲ ಧ್ವನಿ ಮಹಿಳಾ ಒಕ್ಕೂಟದಿಂದ ರೈತ ಮಹಿಳೆಯರಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ಸಂವಾದ ಬದುಕು ಕಾಲೇಜಿನ ಉಪನ್ಯಾಸಕ ರಮೇಶ ಚೀಮನಹಳ್ಳಿ ತರಬೇತಿ ನೀಡಿ, ರೈತರು ಮಣ್ಣಿನ ಲವತ್ತತೆ ಹೆಚ್ಚಿಸುವತ್ತ ಚಿತ್ತಹರಿಸಬೇಕು. ಕೃಷಿಯಲ್ಲಿ ಎರೆಹುಳು ಗೊಬ್ಬರ ತಯಾರಿಕೆ ಅತಿ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ರೈತರು ಗಂಭೀರವಾಗಿ ಚಿಂತಿಸಬೇಕು ಎಂದು ಸಲಹೆ ನೀಡಿದರು.
ಒಕ್ಕೂಟದ ಅಧ್ಯಕ್ಷೆ ಇಂಧಿರಾ ಹೊಸಮನಿ, ಸದಸ್ಯರಾದ ಭುವನೇಶ್ವರಿ ಕಾಂಬಳೆ, ಸುರೇಖಾ ಬನಸೋಡೆ, ಲಕ್ಷ್ಮೀ ಬನಸೋಡೆ, ಗಂಗಾ ದಶವಂತ, ಪವಿತ್ರಾ ಸಾವಳಸಂಗ, ಸಂಗೀತಾ ಮಯೂರ ಸೇರಿ ಅನೇಕ ರೈತ ಮಹಿಳೆಯರಿದ್ದರು.