ಮೈಸೂರಿನಲ್ಲಿ ವೈದ್ಯರು, ಶುಶ್ರೂಷಕರಿಗೆ ಕಾರ್ಯಾಗಾರ

Published on

ಮೈಸೂರು: ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಆಂಟಿಬಯೋಗ್ರಾಮ್, ಆಂಟಿಬಯೋಟಿಕ್ ಬಳಕೆ, ಆಂಟಿ ಮೈಕ್ರೋಬಿಯಲ್ ಆಚರಣೆ ಅಳವಡಿಕೆ ಕುರಿತಂತೆ ಜು.31 ರಂದು ನಗರದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ.
ಕರುಣಾ ಟ್ರಸ್ಟ್, ಫ್ರೋರಿಡಾ ವಿವಿ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಿಂದ ನಗರದ ಹೋಟೆಲ್ ಗ್ರೀನ್ ಹೆರಿಟೇಜ್‌ನಲ್ಲಿ ವೈದ್ಯರು, ಶುಶ್ರೂಷಕರು, ಲ್ಯಾಬ್ ತಂತ್ರಜ್ಞರು, ಔಷಧ ಶಾಸ್ತ್ರಜ್ಞರಿಗಾಗಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ತಜ್ಞೆ ಡಾ.ಸುನೀತಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಗತ್ತಿನಾದ್ಯಂತ ಪ್ರತಿವರ್ಷ ಸುಮಾರು 1.27 ದಶ ಲಕ್ಷ ಜನರು ಆಂಟಿ ಮೈಕ್ರೋಬಿಯಲ್ ಸಮಸ್ಯೆಯಿಂದ ಮೃತಪಡುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ತಿಳಿಸಿದೆ. ಸೋಂಕು ಆಧಾರಿತ ಅನಾರೋಗ್ಯ ಸಮಸ್ಯೆಗಳೂ ಇದಕ್ಕೆ ಕಾರಣವಾಗಿದೆ. ಹೀಗಾಗಿ ಈ ಕ್ಷೇತ್ರದ ಬಗ್ಗೆ ಮಾಹಿತಿ ನೀಡುವ ಉದ್ದೇಶ ಇದಾಗಿದೆ ಎಂದು ಹೇಳಿದರು.
ವೈದ್ಯರಾದ ಡಾ.ಶ್ರೀಕಾಂತ್, ಡಾ.ರೋಜಿ, ಡಾ.ಸುಮನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net