ಕಾಫಿ ಮಂಡಳಿಯಿಂದ ಕಾರ್ಯಾಗಾರ ನಾಳೆ

Published on

ಗೋಣಿಕೊಪ್ಪ: ಕಾಫಿ ಮಂಡಳಿ ಗೊಣಿಕೊಪ್ಪಲು ವತಿಯಿಂದ ಬಾಳೆಲೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಬಾಳೆಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆ.13ರಂದು ಬೆಳಗ್ಗೆ 10 ಗಂಟೆಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಈ ವರ್ಷದ ಅತಿ ಹೆಚ್ಚಿನ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಕೊಳೆರೋಗ ಮತ್ತು ಕಾಫಿ ಉದುರುವುದರ ಬಗ್ಗೆ, ಮರು ನಾಟಿ, ಗೋದಾಮು, ಕಾಫಿ ಕಣ, ಹೊಸ ಕೆರೆ, ಬಾವಿ, ಸ್ಪ್ರಿಂಕ್ಲರ್ ಉಪಕರಣ, ಮೋಟಾರ್ ಮುಂತಾದವುಗಳಿಗೆ ಸಬ್ಸಿಡಿ ನೀಡುವ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತದೆ. ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಕಾಫಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net