

ಗೋಣಿಕೊಪ್ಪ: ಕಾಫಿ ಮಂಡಳಿ ಗೊಣಿಕೊಪ್ಪಲು ವತಿಯಿಂದ ನಿಟ್ಟೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ನಿಟ್ಟೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಗ್ರಾಮ ಮಟ್ಟದ ಕಾಫಿ ಕಾರ್ಯಗಾರ ಸೋಮವಾರ ನಡೆಯಿತು.
ಈ ವರ್ಷದ ಅತಿ ಹೆಚ್ಚಿನ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಕೊಳೆರೋಗ ನಿರ್ವಹಣೆ ಮತ್ತು ಕಾಫಿ ಉದುರುವುದರ ಬಗ್ಗೆ ಹಾಗೂ ಮರು ನಾಟಿ, ಗೋದಾಮು, ಕಾಫಿ ಕಣ, ಹೊಸ ಕೆರೆ, ಬಾವಿ, ಸ್ಪ್ರಿಂಕ್ಲರ್ ಉಪಕರಣ, ಮೋಟಾರ್, ಮಿನಿ ಟ್ರ್ಯಾಕ್ಟರ್ ಮುಂತಾದವುಗಳಿಗೆ ಸಬ್ಸಿಡಿಯನ್ನು ಕಾಫಿ ಮಂಡಳಿಯಿಂದ ನೀಡುತ್ತಿರುವ ಬಗ್ಗೆ ಮಾಹಿತಿಯನ್ನು ಕಾಫಿ ಮಂಡಳಿಯ ಉಪನಿರ್ದೇಶಕರಾದ ಡಾ.ಶ್ರೀದೇವಿ ಮತ್ತು ಗೊಣಿಕೊಪ್ಪಲು ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಮುಖಾರೀಬ್ ಅವರು ಕಾಫಿ ಬೆಳೆಗಾರರಿಗೆ ಮಾಹಿತಿಯನ್ನು ನೀಡಿದರು. ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮ್ಮುಣಿ, ಉಪಾಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಸದಸ್ಯರಾದ ಕಾಟಿ ಮಾಡ ಶರೀನ್ ಮುತ್ತಣ್ಣ, ಪಡಿಞರಂಡ ಕವಿತಾ ಪ್ರಭು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಸುರೇಶ್, ಪ್ರಮುಖರಾದ ಪಾರುವಂಗಡ ಪವನ್, ಮುಕ್ಕಾಟಿರ ಪ್ರಿಸ್ಸ್ ಮುಂತಾದವರು ಹಾಜರಿದ್ದರು.