ಕೆಎಲ್​ಇ ಔಷಛ ವಿಜ್ಞಾನ ಕಾಲೇಜಿನಲ್ಲಿ ಕಾರ್ಯಾಗಾರ

New kle workshop new
Published on

ಹುಬ್ಬಳ್ಳಿ : ನಗರದ ಕೆಎಲ್​ಇ ಔಷಧ ವಿಜ್ಞಾನ ಮಹಾವಿದ್ಯಾಲಯದ ಾರ್ಮಕಾಲಜಿ ವಿಭಾಗದ ಸಹಯೋಗದಲ್ಲಿ ಒಂದು ದಿನದ "ಪ್ರ್ಯಾಕ್ಟಿಕಲ್​ ಅಪ್ರೋಚಸ್​ ಟು ಹಿಸ್ಟೋಪ್ಯಾತೋಲಾಜಿ ಇನ್​ ಪ್ರಿ ಕ್ಲಿನಿಕಲ್​ ರಿಸರ್ಚ್​' ಎಂಬ ವಿಷಯ ಕುರಿತ ಕಾರ್ಯಾಗಾರವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಗದಗಿನ ವೈದ್ಯಕಿಯ ಮತ್ತು ಆಸ್ಪತ್ರೆಯ ಪ್ಯಾತಾಲಾಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜನ ಪಿ. ಮತ್ತು ಬೆಳಗಾವಿ ಕೆಎಲ್​ಇ ಜವಾಹರ ನೆಹರು ವೈದ್ಯಕಿಯ ಮಹಾವಿದ್ಯಾಲಯದ ಹಿರಿಯ ಟೆಕ್ನೀಸಿಯನ್​ ಶಿವಾನಂದ ಹಿರೇಮಠ ಅವರು, ವಿದ್ಯಾಥಿರ್ಗಳಿಗೆ ಹಿಸ್ಟೋಪ್ಯಾತೋಲಾಜಿ ಬಗ್ಗೆ ತರಬೇತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎ.ಎಚ್​.ಎಂ. ವಿಶ್ವನಾಥಸ್ವಾಮಿ, ಸಂಶೋಧನೆಯ ವಿವಿಧ ಆಯಾಮಗಳ ಬಗ್ಗೆ ವಿವರಿಸಿದರು.

ವಿಭಾಗದ ಸಹಾಯಕ ಪ್ರಾಧ್ಯಪಕಾರದ ಡಾ.ಎಸ್​ ಬಿ. ಪಾಟೀಲ ಮತ್ತು ಸುಹಾಸನಿ ಆರಾಧ್ಯ ಪರಿಚಯಿಸಿದರು. ನೇಹಾ ಮಾಳಿ ನಿರೂಪಿಸಿದರು. ಡಾ. ಎಸ್​.ಕೆ .ನಿಂಬಾಳ ವಂದಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net