

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಆಂಗ್ಲ ಭಾಷೆ ನಮ್ಮ ಜೀವನದಲ್ಲಿ ಒಂದು ಅವಿಭಾಜ್ಯ ಅಂಗವಾಗಿದ್ದು, ಸಮಾಜ ಬದಲಾಗುತ್ತಿದ್ದಂತೆ ನಾವೂ ಸಹ ನಮ್ಮ ಕಲಿಕೆಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಅರುಣ್‌ಕುಮಾರ್ ಹೇಳಿದರು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿರುವ ವಕೀಲರ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಆಂಗ್ಲ ಕಲಿಕಾ ಕಾರ್ಯಗಾರದಲ್ಲಿ ಮಾತನಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಬಸವರಾಜ್ ಜಿ.ಸನದಿ ಮಾತನಾಡಿ, ಆಂಗ್ಲಭಾಷೆ ಎಲ್ಲ ವಿಭಾಗಗಳಲ್ಲಿ ಚಿರಪರಿಚಿತವಾಗಿದ್ದು, ಕೆಲ ಪದಗಳನ್ನು ಕನ್ನಡಕ್ಕಿಂತ ಆಂಗ್ಲ ಭಾಷೆಯಲ್ಲಿ ಕೇಳಿದರೆ ಹಾಗೂ ಹೇಳಿದರೆ ಬೇಗ ಆರ್ಥವಾಗುವಂತಹ ಪರಿಸ್ಥಿತಿ ಇದೆ. ಜತೆಗೆ ದೇಶದ ಕಾಯ್ದೆಗಳು ಆಂಗ್ಲ ಭಾಷೆಯಲ್ಲಿದು,್ದ ಅವುಗಳನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಲು ಕೆಲ ಪದಗಳ ಉಚ್ಛಾರಣೆ ಹಾಗೂ ವ್ಯಾಕರಣದ ವ್ಯತ್ಯಾಸವಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಚ್ಚು ಆಂಗ್ಲ ಭಾಷೆ ಬಳಸುವ ಕಾರಣ ಗ್ರಾಮಾಂತರ ಭಾಗಗಳಿಂದ ಬಂದಿರುವ ವಕೀಲರಿಗೆ ಆಂಗ್ಲ ಭಾಷೆಯನ್ನು ಸರಳವಾಗಿ ಅರ್ಥೈಸಿಕೊಂಡು ತಮ್ಮ ವೃತ್ತಿ ಜೀವನದಲ್ಲಿ ಹೆಚ್ಚಿನ ಅನುಕೂಲ ಪಡೆಯುವಂತಾಗಲಿ ಎಂದರು.
ಡೆಪೊನಿಲ್ಸ್ ಇಂಗ್ಲಿಷ್ ಶಾಲೆಯ ಸಿಇಒ ಡಾ.ರಮೇಶ್ ವಕೀಲರಿಗೆ ಉಪನ್ಯಾಸ ನೀಡಿದರು.