ಬಿಜಿಎಸ್ ವಿದ್ಯಾಲಯದಲ್ಲಿ ಕಾರ್ಯಾಗಾರ

kmt_BGS Mirjan
Published on

ಕುಮಟಾ: ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ‘ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತು ಮತ್ತು ಗುರಿ ನಿಗದಿಪಡಿಸುವಿಕೆ’ ಕಾರ್ಯಾಗಾರವನ್ನು ಇತ್ತೀಚೆಗೆ ನಡೆಯಿತು. ಕಮಲಾ ಬಾಳಿಗಾ ಮಹಾವಿದ್ಯಾಲಯದ ಉಪನ್ಯಾಸಕ ಎಸ್.ಕೆ. ಭಟ್ ಮಾಹಿತಿ ನೀಡಿದರು. ಬಿಜಿಎಸ್ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಎಂ.ಟಿ. ಗೌಡ ವಿದ್ಯಾರ್ಥಿಗಳಿಗೆ ತರಗತಿಯ ಶಿಷ್ಟಾಚಾರದ ಕುರಿತು ವಿವರಿಸಿದರು. ಉಪಪ್ರಾಚಾರ್ಯು ಅನುರಾಧಾ ಗುನಗ, ಶಿಕ್ಷಕ ಎಂ.ಜಿ. ಹಿರೇಕುಡಿ, ಇತರರಿದ್ದರು.

ಪ್ರಜ್ವಲಿತಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯು ಅರ್ಚನಾ ಭಟ್, ಶಿಕ್ಷಕಿ ಚೇತನಾ ನಾಯ್ಕ ಹಾಗೂ ಶಿಕ್ಷಕ ರಮೇಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net