ಎನ್‌ಎಸ್‌ಎಸ್ ಶಿಬಿರದಿಂದ ಬರುತ್ತೆ ನಾಯಕತ್ವ ಗುಣ

tubgere 1
workshop
Published on

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಯುವಶಕ್ತಿ ಕುಗ್ಗುತ್ತಿದ್ದು, ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹಾಡೋನಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ಎ.ನಾಗರಾಜು ಹೇಳಿದರು.
ಹಾಡೋನಹಳ್ಳಿ ರಂಗಮಂದಿರದಲ್ಲಿ ಬೆಂಗಳೂರು ನಿಟ್ಟೆ ಕಾಲೇಜು ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಮಾತನಾಡಿದರು.
ಎನ್‌ಎಸ್‌ಎಸ್ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರೆ ನಾಯಕತ್ವ ಗುಣ ರೂಪಿಸಿಕೊಳ್ಳಬಹುದು.
ವಿದ್ಯಾರ್ಥಿಗಳು ಶಿಬಿರಕ್ಕಾಗಿ ಗ್ರಾಮಕ್ಕೆ ಬಂದರೆ, ಅಲ್ಲಿ ಉತ್ಸಾಹ ತುಂಬಿರುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ ಮಾತನಾಡಿ, ಶಿಬಿರಕ್ಕೆ ಸೇರುವವರು ಅನೇಕರು ಹಳ್ಳಿಗರೇ ಆಗಿರುತ್ತಾರೆ. ಇನ್ನು ಕೆಲವರು ಬೆಂಗಳೂರು ಮೂಲದವರು ಇದ್ದಾರೆ. ನಮ್ಮ ಗ್ರಾಮಕ್ಕೆ ಅನೇಕ ವಿದ್ಯಾರ್ಥಿಗಳು ಬಂದು ಇಲ್ಲಿನ ಅನುಭವಗಳನ್ನು ಪಡೆದು ನಾಯಕತ್ವ ಗುಣ ರೂಪಿಸಿಕೊಳ್ಳುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net