

ಬೆಳಗಾವಿ: ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾಲೇಜಿನ ಕನ್ನಡ ಸಂಘ ಹಾಗೂ ಐಕ್ಯೂಎಸಿ ಅಡಿಯಲ್ಲಿ ಪಠ್ಯದಲ್ಲಿ ರಂಗ ಚಟುವಟಿಕೆಗಳು - ಶಿಕ್ಷಣದಲ್ಲಿ ರಂಗಭೂಮಿಯ ಮಹತ್ವತೆ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಹಿರಿಯ ರಂಗಕರ್ಮಿ ಬಾಬಾಸಾಹೇಬ ಕಾಂಬಳೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರಂಗಭೂಮಿಯಲ್ಲಿ ಸತ್ಯದ ಹುಡುಕಾಟ ನಡೆಯುತ್ತಿರುತ್ತದೆ. ಈ ಹುಡುಕಾಟದ ಮಾರ್ಗವೇ ಶಿಕ್ಷಣ. ಶಿಕ್ಷಣ ಮತ್ತು ರಂಗಭೂಮಿ ಮೂಲಕ ಕ್ರಾಂತಿ ಮಾಡಿ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಿದೆ. ನಶಿಸಿ ಹೋಗುತ್ತಿರುವ ರಂಗಭೂಮಿ ಯ ಉಳಿಯುವಿಕೆ ಶಿಕ್ಷಣ ರಂಗದಲ್ಲಿದೆ ಎಂದರು.
ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ ಅಧ್ಯಕ್ಷತೆ ವಹಿಸಿದರು. ಪ್ರೊ.ಸೋನಲ್ ಚಿನಿವಾಲ, ಡಾ. ಗೀತಾ ದಯಣ್ಣವರ, ಪ್ರೊ. ಸುನಿಲ ಪಾಣಿ, ಪ್ರೊ.ಮಲ್ಲಿಕಾರ್ಜುನ ಜಮಖಂಡಿ ಹಾಗೂ ದ್ವಿತೀಯ , ನಾಲ್ಕನೇ ಸೆಮಿಸ್ಟರ್ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎಂ.ಇಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು
ಮುಸ್ಕಾನ ಲಾಡನ್ನವರ ಪ್ರಾರ್ಥಿಸಿದರು, ಡಾ.ಎಸ್.ವಿ.ವಾಲಿಶೆಟ್ಟಿ ಸ್ವಾಗತಿಸಿದರು. ಪ್ರೊ.ಮಂಜುನಾಥ ಕಲಾಲ ನಿರೂಪಿಸಿದರು.