ಗ್ರಾಮಗಳ ಅಭಿವೃದ್ಧಿಗಾಗಿ ಆದಿ ಕರ್ಮಯೋಗಿ ಅಭಿಯಾನ

11HDK03
ಎಚ್.ಡಿ.ಕೋಟೆ ತಾಪಂ ಆವರಣದಲ್ಲಿ ಆಯೋಜಿಸಿದ್ದ ಆದಿ ಕರ್ಮಯೋಗಿ ಅಭಿಯಾನದಡಿ ತಾಲೂಕು ಮಟ್ಟದ ಕಾರ್ಯಾಗಾರವನ್ನು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಜಿ.ಆರ್.ಮಹೇಶ್ ಉದ್ಘಾಟಿಸಿದರು.
Published on

ಎಚ್.ಡಿ.ಕೋಟೆ: ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿಗಾಗಿ ಆದಿ ಕರ್ಮಯೋಗಿ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಜಿ.ಆರ್.ಮಹೇಶ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಪ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ ಆದಿ ಕರ್ಮಯೋಗಿ ಅಭಿಯಾನದಡಿ ತಾಲೂಕು ಮಟ್ಟದ ಮಾಸ್ಟರ್ಸ್ ತರಬೇತುದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಮನ್ವಯದೊಂದಿಗೆ ಒಂದು ದಿನದ ಓರಿಯೆಂಟೇಷನ್ ಮತ್ತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರಲು ಈ ಹಿಂದೆ ಹಲವು ಇಲಾಖೆಗಳು ಅನೇಕ ಯೋಜನೆಗಳನ್ನು ರೂಪಿಸಿದ್ದವು. ಆದರೆ ಈ ಯೋಜನೆಯಲ್ಲಿ ಎಂಟು ಇಲಾಖೆಗಳು ಒಗ್ಗೂಡಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈ ಯೋಜನೆ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಒಂದು ಸಮುದಾಯ ಅಭಿವೃದ್ಧಿಯಾಗಬೇಕಾದರೆ ಒಗ್ಗಟ್ಟು ಅವಶ್ಯಕತೆ ಇರುವುದರಿಂದ ಈ ಯೋಜನೆಯಡಿ ಹಲವು ಇಲಾಖೆಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತವೆ. ಈ ಯೋಜನೆಯಡಿ ರಾಜ್ಯದಲ್ಲಿ 14 ಜಿಲ್ಲೆಗಳ 993 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದೆ. ಅದರಲ್ಲಿ ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕುಗಳಲ್ಲಿ 23 ಗ್ರಾಮಗಳು ಆಯ್ಕೆಯಾಗಿವೆ ಎಂದರು.

ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶರಣಪ್ಪ, ಪರಿಶಿಷ್ಟ ವರ್ಗಗಳ ಇಲಾಖೆಯ ಕಚೇರಿ ವ್ಯವಸ್ಥಾಪಕ ನಾಗರಾಜು, ಕಂದಾಯ ಇಲಾಖೆಯ ಆರ್.ಐ. ಗೋವಿಂದರಾಜು, ವಿಎ ಗಳಾದ ಯೋಗೇಶ್, ಮೊದಿನ್ ಗೌಸ್, ವಿವೇಕಾನಂದ ಯೂತ್ ಮೂವ್‌ಮೆಂಟ್ ವ್ಯವಸ್ಥಾಪಕ ಬಿ.ವಿ. ಶಂಕರ್, ಸಂಯೋಜಕ ನಾಗೇಶ್, ಡಿ.ಬಿ.ಕುಪ್ಪೆ ಪಿಡಿಒ ಸ್ವಾಮಿ, ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ರಂಜಿತಾ, ಶಿಕ್ಷಣ ಇಲಾಖೆಯ ಚನ್ನನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net