ಕಾರ್ಬನ್ ಕ್ರೆಡಿಟ್‌ ಭವಿಷ್ಯ, ಆರ್ಥಿಕ ಲಾಭದ ಮಾಹಿತಿ ಕಾರ್ಯಾಗಾರ

30mdk08
Published on

ಗೋಣಿಕೊಪ್ಪ:

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಪೊನ್ನಂಪೇಟೆ ಅರಣ್ಯ ಕಾಲೇಜು ಸಂಯುಕ್ತಾಶ್ರಯದಲ್ಲಿ ಕೊಡಗು ಜಿಲ್ಲೆಯ ಕೃಷಿ ಮತ್ತು ಕಾಫಿ ಆಧಾರಿತ ವ್ಯವಸ್ಥೆಯಲ್ಲಿ ಕಾರ್ಬನ್ ಕ್ರೆಡಿಟ್‌ಗೆ ಭವಿಷ್ಯ ಮತ್ತು ಅದರಿಂದ ಆರ್ಥಿಕ ಲಾಭ ಗಳಿಸಲು ಇರುವ ಅವಕಾಶಗಳ ಕುರಿತು ರೈತರು ಮತ್ತು ಕಾಫಿ ಬೆಳೆಗಾರರಲ್ಲಿ ಅರಿವು ಮೂಡಿಸುವ ಕಾರ್ಯಾಗಾರ ಮಂಗಳವಾರ ಪೊನ್ನಂಪೇಟೆಯಲ್ಲಿ ನಡೆಯಿತು.

ಅರಣ್ಯ ಕಾಲೇಜು ಆವರಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಎಂ. ಬಾಲಸುಬ್ರಮಣಿಯನ್, ಡಾ. ಜೇಮ್ಸ್ ಜೇಕಬ್ ಹಾಗೂ ಡಾ. ಅಜ್ಜಿಕುಟ್ಟೀರ ಅದೀತ್ ಕಾರ್ಯಪ್ಪ ಪಾಲ್ಗೊಂಡು ತಾಂತ್ರಿಕ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಪಿ.ಜಿ. ಚಂಗಪ್ಪ ವಹಿಸಿದ್ದರು. ಅರಣ್ಯ ಕಾಲೇಜು ಮುಖ್ಯಸ್ಥ ಡಾ. ಸಿ.ಜಿ.ಕುಶಾಲಪ್ಪ ಕಾರ್ಯಾಗಾರದ ಮುಖ್ಯ ಉದ್ದೇಶವನ್ನು ವಿವರಿಸಿದರು. ಅರಣ್ಯ ಕಾಲೇಜು ಉಪನ್ಯಾಸಕ ಮತ್ತು ವಿಭಾಗದ ಮುಖ್ಯಸ್ಥರೂ ಆದ ಡಾ. ಜಿ.ಎಮ್. ದೇವಗಿರಿ ಕಾರ್ಬನ್ ಕ್ರೆಡಿಟ್‌ನಿಮದ ಜಿಲ್ಲೆಯ ರೈತರು ಮತ್ತು ಕಾಫಿ ಬೆಳೆಗಾರರು ಆರ್ಥಿಕ ಲಾಭ ಗಳಿಸಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಯು. ಅಶೋಕ್, ಉಪಾಧ್ಯಕ್ಷ ಎ. ನಂದಾ ಬೆಳ್ಳಿಯಪ್ಪ, ಜಿಲ್ಲೆಯ ರೈತರು ಹಾಗೂ ಬೆಳೆಗಾರರು ಈ ಕಾರ್ಯಗಾರದಲ್ಲಿ ಭಾಗವಹಿಸಿ ಅಗತ್ಯ ಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net