ಮಾತೃಭಾಷೆಯನ್ನು ವಿಶ್ವಭಾಷೆಯಾಗಿಸಲು ಕಾರ್ಯೋನ್ಮುಖರಾಗಿ

15M.D.R.1..
ಮರಳಿಗ ಗ್ರಾಮದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಹಾರೈಸಿ ಮರಳಿಗ ಯುವ ಬ್ರಿಗೇಡ್ ಆಯೋಜಿಸಿದ್ದ ನಮ್ಮೂರ ಕನ್ನಡ ಹಬ್ಬ ಆಚರಣೆ ಕಾರ್ಯಕ್ರಮವನ್ನು ಯುವ ಸಾಹಿತಿ ಸಿ.ಎಂ.ಕ್ರಾಂತಿಸಿಂಹ ಉದ್ಘಾಟಿಸಿದರು. ಸ್ವಾಮಿ, ನಂಜೇಗೌಡ, ಶ್ರೀನಿವಾಸ, ಗೋವಿಂದು ಇದ್ದರು.
Published on

ಮದ್ದೂರು: ಯುವ ಜನರು ಕನ್ನಡ ಭಾಷೆಯ ಉಳಿವು, ಬೆಳವಣಿಗೆ, ಸಂರಕ್ಷಣೆಗೆ ಸದಾ ಮುಂದಾಗುವ ಮೂಲಕ ಮಾತೃಭಾಷೆಯನ್ನು ವಿಶ್ವ ಭಾಷೆಯಾಗಿಸಲು ಪ್ರತಿಕ್ಷಣವೂ ಕಾರ್ಯೋನ್ಮೂಖರಾಗಿ ಕನ್ನಡ ತನವನ್ನು ಕಾಪಿಟ್ಟಿಕೊಳ್ಳಬೇಕೆಂದು ಯುವ ಸಾಹಿತಿ, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎಂ.ಕ್ರಾಂತಿಸಿಂಹ ತಿಳಿಸಿದರು.

ತಾಲೂಕಿನ ಮರಳಿಗ ಗ್ರಾಮದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಹಾರೈಸಿ ಮರಳಿಗ ಯುವ ಬ್ರಿಗೇಡ್ ಭಾನುವಾರ ಆಯೋಜಿಸಿದ್ದ ನಮ್ಮೂರ ಕನ್ನಡ ಹಬ್ಬ ಆಚರಣೆ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆಯ ಸಂರಕ್ಷಣೆಗೆ ಕನ್ನಡದ ಪ್ರಪ್ರಥಮ ಸಾಮ್ರಾಜ್ಯ ಕದಂಬರ ಮಯೂರ ವರ್ಮರಿಂದ ಮೈಸೂರು ಒಡೆಯರ್‌ವರೆಗೆ ಕನ್ನಡ ಭಾಷೆಯ ಸಂರಕ್ಷಣೆಗೆ ಶ್ರಮಿಸಿದ್ದಾರೆ, ವಚನ ಸಾಹಿತ್ಯ ಕಾಲಘಟ್ಟದಲ್ಲಿ ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿತ್ತು. ಎಂಟು ಜ್ಞಾನಪೀಠ ಪ್ರಶಸ್ತಿ, ಎರಡು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಕನ್ನಡ ಭಾಷೆ ವಿಶ್ವದೆಲ್ಲೆಡೆ ತನ್ನ ಛಾಪು ಮೂಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಳಿಗ ಗ್ರಾಮಸ್ಥರೆಲ್ಲರೂ ಭಾಗವಹಿಸಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮದ್ದೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸ್ವಾಮಿ ಮಾತನಾಡಿ, ಕನ್ನಡಿಗರು ಕನ್ನಡ ಭಾಷೆಯನ್ನು ಉಸಿರಾಗಿಕೊಂಡು ಬದುಕಬೇಕು. ಆ ಮೂಲಕ ಮಾತೃ ಭಾಷೆ ಸೇವೆ ಮಾಡಬೇಕೆಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರಾದ ನಂಜೇಗೌಡ, ಚಿತ್ರ ಕಲಾವಿದ ಗೋವಿಂದ, ಶ್ರೀನಿವಾಸ ಹಾಗೂ ಮರಳಿಗ ಯುವ ಬ್ರಿಗೇಡ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net