ಸೌಹಾರ್ದಕ್ಕಾಗಿ ಒಗ್ಗಟ್ಟಿನ ಕಾರ್ಯಚಟುವಟಿಕೆ

kalavara
ರೋವರ್ಸ್‌-ರೇಂಜರ್ಸ್‌ ಘಟಕದ ವತಿಯಿಂದ ಸದ್ಭಾವನಾ ದಿನಾಚರಣೆ ಅಂಗವಾಗಿ ಪ್ರಭಾರ ಪ್ರಾಂಶುಪಾಲ ರಾಮರಾಯ ಆಚಾರ್ಯ ಪ್ರತಿಜ್ಞೆ ಬೋಧಿಸಿದರು
Published on

ಕೋಟ: ಜಾತಿ, ಧರ್ಮ, ಪ್ರದೇಶ ಅಥವಾ ಭಾಷೆ ಭೇದವಿಲ್ಲದೇ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಒಗ್ಗಟ್ಟಿನಿಂದ ಕಾರ್ಯಚಟುವಟಿಕೆ ಮಾಡಬೇಕು ಎಂದು ಪ್ರಭಾರ ಪ್ರಾಂಶುಪಾಲ ರಾಮರಾಯ ಆಚಾರ್ಯ ಹೇಳಿದರು.

ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್ಸ್‌-ರೇಂಜರ್ಸ್‌ ಘಟಕ ವತಿಯಿಂದ ಸದ್ಭಾವನಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಐಕ್ಯುಎಸಿ ಸಂಚಾಲಕರಾದ ನಾಗರಾಜ ಯು., ಗಣೇಶ ಪೈ, ನಾಗರಾಜ ವೈದ್ಯ ಎಂ., ರವಿಚಂದ್ರ ಎಚ್.ಎಸ್., ಡಾ.ಭಾಗೀರಥಿ ನಾಯ್ಕ ಉಪಸ್ಥಿತರಿದ್ದರು. ರೇಂಜರ್ ಲೀಡರ್ ಡಾ.ಮುನಿರತ್ನಮ್ಮ ಎಲ್.ಎಂ. ಸ್ವಾಗತಿಸಿದರು. ವಿದ್ಯಾರ್ಥಿ ನಾಯಕರಾದ ರೋವರ್ ಗಣೇಶ, ರೇಂಜರ್ ಪರಿಣಿತಾ ಉಪಸ್ಥಿತರಿದ್ದರು. ನವ್ಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net