

ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಬಡವರ ಹಿತ ಕಾಯುವ ಕೆಲಸ ಮಾಡಿದ್ದೇನೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ 15ನೇ ವಾರ್ಡ್ ಚನ್ನಕ್ಕಿಹೊಂಡ, ಭೋವಿ ಕಾಲನಿಯ 230ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೋಮವಾರ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ನಗರದ ಎಲ್ಲ ಕಡೆ ಅರ್ಹರಿಗೆ ವಿತರಿಸುತ್ತಿರುವ ಹಕ್ಕುಪತ್ರಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಅರ್ಹರ ಪೈಕಿ ಯಾರಿಗಾದರೂ ಹಕ್ಕುಪತ್ರ
ಸಿಗದೇ ಇದ್ದರೆ ನಗರಸಭೆ ಸದಸ್ಯರ ಗಮನಕ್ಕೆ ಅಥವಾ ನನ್ನ ಗಮನಕ್ಕೆ ತಂದರೆ ಕೊಡಿಸಲಾಗುವುದು. ಆತಂಕ ಪಡುವ ಅಗತ್ಯವಿಲ್ಲ ಎಂದರು.
ನಗರಸಭೆ ಸದಸ್ಯ ಡಿ. ಮಲ್ಲಿಕಾರ್ಜುನ್ ಮಾತನಾಡಿ, ಶಾಸಕರ ಸಹಕಾರದೊಂದಿಗೆ ವಾರ್ಡ್‌ನಲ್ಲಿ ಬೀದಿದೀಪ, ಸಿ.ಸಿ. ರಸ್ತೆಗಳು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದು ತಿಳಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಬಿಜೆಪಿ ಮುಖಂಡ ಮಲ್ಲಿಕಾರ್ಜುನ್, ಗರಡಿ ಪ್ರಕಾಶ್ ಇದ್ದರು.