ಗಡಿಭಾಗದ ಶಿಕ್ಷಕನ ಕಾರ್ಯ ಮಾದರಿ

P PURA GOWRAVAA 2 (1)
Published on

ಪರಶುರಾಮಪುರ: ಆಂಧ್ರಗಡಿಯಲ್ಲಿನ ಕನ್ನಡಿಗರ ಮಕ್ಕಳಿಗೆ ಪ್ರೌಢಹಂತದ ಗುಣಮಟ್ಟದ ಶಿಕ್ಷಣ ನೀಡಿದ ಶಿಕ್ಷಕರನ್ನು ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ರೋಣ ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಚಿತ್ರದುರ್ಗ ಜಿಲ್ಲೆಯ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀನಿವಾಸಮೂರ್ತಿಗೆ ಡಾ.ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಆಂಧ್ರಗಡಿ ಅಂಚಿನಲ್ಲಿರುವ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಪ್ರತಿಭಾ ಅಕಾಡೆಮಿಯ ರಾಷ್ಟ್ರೀಯ ಮಟ್ಟದ ಪ್ರತಿಭಾ ಪರೀಕ್ಷೆಗಳನ್ನು ಏರ್ಪಡಿಸುವ ಜತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯನ್ನು ಉಂಟು ಮಾಡಲು ಶ್ರೀನಿವಾಸಮೂರ್ತಿ ತೆಗೆದುಕೊಂಡು ಕ್ರಮಗಳು ಮಾದರಿ ಆಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನವಲಗುಂದ ಶಾಸಕ ಎಚ್.ಕೋನರೆಡ್ಡಿ, ಬೆಂಗಳೂರಿನ ಪ್ರತಿಭಾ ಅಕಾಡೆಮಿ ಅಧ್ಯಕ್ಷ ಶಂಕರ ಪಾಟೀಲ, ಶಿಕ್ಷಣತಜ್ಞ ಪುತ್ತೂರಾಯ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net