ಉಡುಪಿಯಿಂದ ಮಧ್ಯಪ್ರದೇಶಕ್ಕೆ, ಕಾಲ್ನಡಿಗೆಯಲ್ಲಿ ಹೊರಟ ಕಾರ್ಮಿಕರು, ಬಾರಕೂರಿನಲ್ಲಿ ವಸತಿ ವ್ಯವಸ್ಥೆ

walk
Published on

ಕುಂದಾಪುರ: ಲಾಕ್‌ಡೌನ್‌ನಿಂದಾಗಿ ಹಣವಿಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡಿ, ಕಾಲ್ನಡಿಗೆಯಲ್ಲೇ ಊರಿಗೆ ಹೊರಟಿದ್ದ ಮಧ್ಯಪ್ರದೇಶದ ಓರ್ವ ಅಂಗವಿಕಲ, ಇನ್ನೋರ್ವ ಹಿರಿಯ ನಾಗರಿಕ ಸಹಿತ 9 ಕಾರ್ಮಿಕರಿಗೆ ಬಾರಕೂರು ಶೆಲ್ಟರ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾನ್ಪುರದ ಗುತ್ತಿಗೆದಾರ ಕರೆತಂದ ಕಾರ್ಮಿಕರು ಉಡುಪಿಯಲ್ಲಿ ರೈಲ್ವೆ, ರಸ್ತೆ ಕೆಲಸ ಮಾಡುತ್ತಿದ್ದರು.

ಲಾಕ್‌ಡೌನ್ ನಂತರ ಗುತ್ತಿಗೆದಾರ ಪರಾರಿಯಾಗಿದ್ದು, ಕಾರ್ಮಿಕರು ಅತಂತ್ರರಾಗಿ ಹೇಗಾದರೂ ಊರು ತಲುಪಲು ನಿರ್ಧರಿಸಿದ್ದರು. ಇರುವ ಚೂರು ಪಾರು ಹಣದಲ್ಲೇ ಅರ್ಧ ಹೊಟ್ಟೆ ಉಂಡು ನೀರು ಸಿಕ್ಕಲ್ಲಿ ಆಹಾರ ಬೇಯಿಸಿ ತಿನ್ನುತ್ತಿದ್ದರು. ಉಡುಪಿಯಿಂದ ರೈಲ್ವೆ ರಸ್ತೆಯಲ್ಲಿ ಬಂದು ಕುಂದಾಪುರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ಮುಂದುವರಿಸಿದ್ದರು.

ವಿಜಯವಾಣಿ ಸ್ಪಂದನೆ: ವಲಸೆ ಕಾರ್ಮಿಕರ ಸ್ಥಿತಿಗತಿ ಬಗ್ಗೆ ‘ವಿಜಯವಾಣಿ’ ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು ಗಮನಕ್ಕೆ ತಂದಿತ್ತು. ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ಕೂಡ ಈ ನಿಟ್ಟಿನಲ್ಲಿ ಪ್ರಯತ್ನಿಸಿದರು. ಬೈಂದೂರು ಶೆಲ್ಟರ್‌ಗೆ ಸೇರಿಸುವಂತೆ ಎಸಿ ಸೂಚಿಸಿದರೂ ತಹಸೀಲ್ದಾರ್ ಬಿ.ಪಿ.ಪೂಜಾರ್ ಗಣನೆಗೆ ತೆಗೆದುಕೊಳ್ಳಲಿಲ್ಲ. ಬಳಿಕ ಬೈಂದೂರು ಪಿಎಸ್‌ಐ ಸಂಗೀತಾ ವಾಹನ ವ್ಯವಸ್ಥೆ ಮಾಡಿ ಬಾರ್ಕೂರು ಶೆಲ್ಟರ್‌ಗೆ ಸೇರಿಸಿ ಮಾನವೀಯತೆ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net