

ಚಿಕ್ಕಮಗಳೂರು: ಶಾಮಿಯಾನ, ಡೆಕೋರೇಟರ್ಸ್ ಸೌಂಡ್ಸ್ ಮತ್ತು ಲೈಟ್ಸ್ ಮಾಲೀಕರ ಸಂಘದ ಸದಸ್ಯರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದು ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.
ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಶಾಮಿಯಾನ, ಡೆಕೋರೇಟರ್ಸ್ ಸೌಂಡ್ಸ್ ಮತ್ತು ಲೈಟ್ಸ್ ಮಾಲೀಕರ ಸಂಘದ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಯಾವುದೇ ಸಭೆ, ಸಮಾರಂಭಗಳು ಯಶಸ್ವಿಯಾಗಬೇಕಾದರೆ ಶಾಮಿಯಾನ, ಡೆಕೋರೇಟ್ಸ್ ಸೌಂಡ್ ಮತ್ತು ಲೈಟಿಂಗ್ ಬಹಾಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.ರಾಜ್ಯ ಸಂಘದ ಸಂಸ್ಥಾಪಕ ಮೆಹಬೂಬ್ ಉಲ್ಲಾ ಮಾತನಾಡಿ, ಪಕ್ಷ, ಜಾತಿ, ಮತ, ಭೇದ ಇಲ್ಲದೆ ಕರ್ತವ್ಯ ನಿರ್ವಹಿಸುವ ಶಾಮಿಯಾನ ಕಾರ್ಮಿಕರ ಸಮಸ್ಯೆಗಳನ್ನು 2004ರಿಂದ ಸರ್ಕಾರಗಳ ಗಮನಕ್ಕೆ ತರುತತಿದ್ದರೂ ಪ್ರಯೋಜನವಾಗಿಲ್ಲ. ಸಂಘದ ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದರು.ಸಂಘದ ಅಧ್ಯಕ್ಷ ಆರ್.ಲಕ್ಷ್ಮಣ್, ಜಿಲ್ಲಾಧ್ಯಕ್ಷ ಸದಾಶಿವ, ಕಾಂಗ್ರೆಸ್ ನಗರಾಧ್ಯಕ್ಷ ತನೂಜ್‌ಕುಮಾರ್, ಸೌಂಡ್ಸ್ ಮತ್ತು ಲೈಟ್ಸ್ ಮಾಲೀಕರ ಜಿಲ್ಲಾಧ್ಯಕ್ಷ ನಾಸಿರ್ ಕೊಪ್ಪ, ಗೌರವಾಧ್ಯಕ್ಷ ಚಂದ್ರು, ಉಪಾಧ್ಯಕ್ಷ ರಾಜೇಗೌಡ, ಪ್ರಧಾನ ಕಾರ್ಯದರ್ಶಿ ಆನಂದ್, ಸಹಕಾರ್ಯದರ್ಶಿ ರವಿಕುಮಾರ್, ಖಜಾಂಚಿ ವಿವಿಲ್‌ಬೆನ್ನಿಸ್, ಸಲಹೆಗಾರ ಪುನೀತ್‌ಕುಮಾರ್, ಸಂಚಾಲಕರಾದ ತಬ್ರೇಜ್, ರಮೇಶ್ ಇತರರಿದ್ದರು.