ಕಾರ್ಮಿಕರ ಹಕ್ಕುಗಳ ವೇದಿಕೆ ಜಿಲ್ಲಾ ಘಟಕದಿಂದ ಕಾರ್ಮಿಕ ದಿನಾಚರಣೆ

raichur
raichur
Published on

 ರಾಯಚೂರು ಕಾರ್ಮಿಕರಲ್ಲಿ ತಮಗಾಗಿಸರ್ಕಾರ ಹಾಗೂ ಸಂವಿಧಾನ ನೀಡಿರುವ ಹಕ್ಕುಗಳು, ಕರ್ತವ್ಯ ಹಾಗೂ ಕಾನೂನಿನ ಬಗ್ಗೆ ಅರಿವು ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬರು ಹಕ್ಕುಗಳ ಬಗ್ಗೆ ಅರಿತುಕೊಳ್ಳಬೇಕೆಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಽÃಶರು ಹಾಗೂ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಎಚ್.ಕೆ.ಸಾತ್ವಿಕ್ ಹೇಳಿದರು.

ನಗರದ ಮನೋರಂಜನಾ ಕೇಂದ್ರದಲ್ಲಿ ಗುರುವಾರ ಕಾರ್ಮಿಕರ ಹಕ್ಕುಗಳ ವೇದಿಕೆ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಸಾಕಷ್ಟು ಕಾರ್ಮಿಕರಿದ್ದು, ಕೌಶಲ್ಯ ಇರುವ ಕಾರ್ಮಿಕರ ಅವಶ್ಯಕತೆ ದೇಶಕ್ಕೆ ಹೆಚ್ಚಿದ್ದು, ಕಾರ್ಮಿಕರು ತಮ್ಮ ಕೆಲಸದಲ್ಲಿ ಕೌಶಲ್ಯವನ್ನು ತೋರಿಸುವುದು ಅತ್ಯಂತ ಮುಖ್ಯವಾಗಿದೆ. ಕಾರ್ಮಿಕರು ಶ್ರಮ ಜೀವಿಗಳಾಗಿದ್ದು,

ಪ್ರತಿಯೊಬ್ಬ ಕಾರ್ಮಿಕರಲ್ಲಿ ಕೌಶಲ್ಯ ಹೆಚ್ಚಾಗಿರುತ್ತದೆ. ಪ್ರಸ್ತುತ ದಿನಗಳಲ್ಲಿ ಕಾರ್ಮಿಕರಿಗ ಹೆಚ್ಚಿನ ಬೇಡಿಕೆಯಿದ್ದು, ಕೌಶಲ್ಯವನ್ನು ತೋರಿಸಲು ಮುಂದಾಗಬೇಕು. ಕೆಲಸ ಮಾಡುವ ಸ್ಥಳಗಳಲ್ಲಿ ಕೆಲಸ ಮಾಡುತ್ತೇವೆ ಎಂದು ತೋರಿಸಲು ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಏಕೆಂದರೆ ಕೆಲಸ ಮಾಡುವ ಸಂದರ್ಭದಲ್ಲಿ ಯಾವುದೆ ಅಪಘಾತವಾದಲ್ಲಿ ಪರಿಹಾರ ಕೊಡಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.ದಾಖಲೆಗಳನ್ನು ನೀಡದೇ ಇರುವ ಸಂದರ್ಭದಲ್ಲಿ ಮೌಖಿಕ ಸಾಕ್ಷಿಯನ್ನಾದರೂ ಸಿದ್ದಪಡಿಸಿಕೊಂಡಿರಬೇಕು. ಇದರಿಂದ ಅಪಘಾತದಲ್ಲಿ ಗಾಯಗೊಂಡರೇ ಅಥವಾ ಮೃತಪಟ್ಟರೆ ಅದಕ್ಕೆ ಪರಿಹಾರವನ್ನು ಕೊಡಿಸಬಹುದಾಗಿದೆ ಎಂದರು.

ಕೃಷಿ ವಿವಿಯ ಕುಲಪತಿ ಡಾ.ಎಂ.ಹನುಮAತಪ್ಪ ಮಾತನಾಡಿ, ಕಾವಿ ದುಡಿಮೆಯ ಆಯಾ ಸಂಸ್ಥೆಯ ಮಾಲಿಕನ ಸಂಪತ್ತಾಗಿರುತ್ತದೆ. ಆರೋಗ್ಯ ವನ್ನು ಸರಿಯಾಗಿ ನೋಡಿಕೊಳ್ಳಬೇಕು. ಕೌಶಲ್ಯವಿರವ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆಯಿದೆ. ಸರ್ಕಾರ ೮ ಗಂಟೆ ಕೆಲಸ ಸೀಮಿತಗೊಳಿಸಿದೆ.ಕಾರ್ಮಿಕರು ಸರ್ಕಾರ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಽಕಾರಿ ಆರತಿ, ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಪಾವಗಡ ಶ್ರೀರಾಮ್, ಪ್ರಮುಖರಾದ ಎಸ್,ಮಾರೆಪ್ಪ, ಶ್ರೀಕಾಂತ ಯರಮರಸ್,ಲಕ್ಷ÷್ಮಪ್ಪ ಭಂಡಾರಿ, ಉರುಕುಂದಪ್ಪ, ನರಸಿಂಹಲು,ಹೇಮರಾಜ ಅಸ್ಕಿಹಾಳ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net