ಪಶ್ಚಿಮ ಬಂಗಾಳದತ್ತ ಹೊರಟ ಕಾರ್ಮಿಕರು

MAY 28, HNP., PH.1.
Published on

ಹೊಳೆನರಸೀಪುರ: ಜಿಲ್ಲಾಡಳಿತ ಸೂಚನೆಯಂತೆ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರನ್ನು ಕಳುಹಿಸಲು ಹಾಸನ ರೈಲು ನಿಲ್ದಾಣಕ್ಕೆ ಕಳುಹಿಸಿ ಕೊಡಲಾಗುತ್ತಿದೆ ಎಂದು ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಿದ್ದ ಪಶ್ಚಿಮ ಬಂಗಾಳ ಮೂಲದ 67 ವಲಸೆ ಕಾರ್ಮಿಕರು ಮತ್ತು 4 ಮಕ್ಕಳಿಗೆ ಅನುಮತಿ ಪತ್ರ ವಿತರಿಸಿ, ಆರೋಗ್ಯ ತಪಾಸಣೆ ನಡೆಸಿದ ನಂತರ 3 ಬಸ್ಸಿನಲ್ಲಿ ಹಾಸನದ ರೈಲ್ವೆ ನಿಲ್ದಾಣಕ್ಕೆ ಕಳುಹಿಸುವ ಸಂದರ್ಭದಲ್ಲಿ ಮಾತನಾಡಿದರು.

ಕರೊನಾ ವೈರಸ್‌ನಿಂದ ರಕ್ಷಣೆ ಪಡೆಯಲು ಅಂತರ ಕಾಪಾಡಿಕೊಂಡು, ಸರ್ಕಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿರಿ ಮತ್ತು ತಾಳ್ಮೆಯಿಂದ ವರ್ತಿಸಿರಿ ಎಂದು ಪ್ರಯಾಣಕ್ಕೆ ಶುಭ ಕೋರಿದರು.

ಜಿಲ್ಲಾ ಕೇಂದ್ರದಿಂದ ಶ್ರಮಿಕ್ ರೈಲಿನಲ್ಲಿ ತೆರಳಲಿದ್ದಾರೆ. ವೆಚ್ಚವು ಉಚಿತವಾಗಿದೆ. ಇವರ ಊಟದ ವ್ಯವಸ್ಥೆಯನ್ನು ಹಾಸನದಲ್ಲಿ ನೋಡಲ್ ಅಧಿಕಾರಿಗಳು ವ್ಯವಸ್ಥೆ ಮಾಡಿಸಲಿದ್ದಾರೆ ಎಂದರು.

ಕಾರ್ಮಿಕ ಇಲಾಖೆ ನಿರೀಕ್ಷಕಿ ಮಂಗಳಗೌರಿ, ಉಪ ತಹಸೀಲ್ದಾರ್ ಶಿವಕುಮಾರ್, ಶಿರಸ್ತೇದಾರ್ ರವಿಕುಮಾರ್, ರಾಜಸ್ವ ನಿರೀಕ್ಷಕ ಸತೀಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಹರೀಶ್ ಬಣಕರ್, ಉದಯ್, ಕಿರಿಯ ಆರೋಗ್ಯ ಸಹಾಯಕ ಜೆ.ಟಿ.ಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net