ದೇಶ ಕಟ್ಟುವಲ್ಲಿ ಕಾರ್ಮಿಕರ ಶ್ರಮ ಅಧಿಕ

01 SARAG 3
ಸರಗೂರಿನ ಲೋಡರ್ಸ್‌ ಅಸೋಸಿಯೇಷನ್ ಕಚೇರಿಯಲ್ಲಿ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜವರಯ್ಯ, ಚಿಕ್ಕಣ್ಣ, ಗೊವಿಂದರಾಜು, ವೆಂಕಟೇಶ್, ರವಿಕುಮಾರ್ ಇತರರು ಇದ್ದರು.
Published on

ಸರಗೂರು: ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ವಾಹನ ಚಾಲಕರ ಸಂಘದ ಅಧ್ಯಕ್ಷ ಬಿರ್ವಾಳ್ ಚಿಕ್ಕಣ್ಣ ಹೇಳಿದರು.

ಪಟ್ಟಣದ ಲೋಡರ್ಸ್‌ ಅಸೋಸಿಯೇಷನ್‌ನ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಮಿಕರು ನಿತ್ಯ ಅವಿರತವಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ಸರ್ಕಾರಗಳು ಅವರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಕಾರ್ಮಿಕ ಇಲಾಖೆ ಅವರಿಗೆ ಗುಣಮಟ್ಟದ ಸೌಲಭ್ಯಗಳನ್ನು ನೀಡಬೇಕು ಎಂದು ಸಲಹೆ ನೀಡಿದರು. ಲೋಡರ್ಸ್‌ ಅಸೋಸಿಯೇಷನ್ ಸಂಘಕ್ಕೆ 25 ಚೇರ್‌ಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಲೋಡರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಜವರಯ್ಯ(ಕೂಸಣ್ಣ) ಮಾತನಾಡಿ, ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಯಾವುದೇ ಕೆಲಸವನ್ನು ಮಾಡಬೇಕಾದರೂ ಕಾರ್ಮಿಕರು ಬೇಕು. ಕಾರ್ಮಿಕರಿಲ್ಲದಿದ್ದರೆ ಕಟ್ಟಡ ಸುಂದರವಾಗಿ ಕಾಣಲ್ಲ. ಸ್ವಚ್ಛತೆ ಇರಲ್ಲ. ಆಹಾರ ಸಿಗಲ್ಲ. ಬಟ್ಟೆ ಇರಲ್ಲ. ಹೀಗೆ ಕಾರ್ಮಿಕರು ಇಲ್ಲವಾದರೆ ಮಾನವ ಬದುಕುವುದು ಕಷ್ಟವಾಗಲಿದೆ. ಹೀಗಾಗಿ ಕಾರ್ಮಿಕರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ರೈಸ್‌ಮಿಲ್‌ನ ತಿಮ್ಮನಾಯಕ, ರಂಗನಾಥ್, ಮಾದಪ್ಪಶೆಟ್ಟಿ, ಪ್ರಕಾಶ್, ಭೀಮಯ್ಯ, ಎಪಿಎಂಸಿ ರಂಗನಾಯಕ, ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಅಸೋಸಿಯೇಷನ್ ಉಪಾಧ್ಯಕ್ಷ ಸಿ.ವೆಂಕಟೇಶ್, ಕಾರ್ಯದರ್ಶಿ ಶ್ರೀಕಂಠ, ಸಹ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಚಿಕ್ಕಣ್ಣ, ಸದಸ್ಯರಾದ ಮಂಜು, ಕರಿಯಪ್ಪ, ಚಂದ್ರ, ಶ್ರೀನಾಥ್, ಗೋವಿಂದರಾಜು, ರಂಗಸ್ವಾಮಿ, ಹುಚ್ಚಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net