ಲಕ್ಷ್ಮಣ ಸವದಿ ಗೆಲುವಿಗೆ ಕಾರ್ಯಕರ್ತರ ಸಂಭ್ರಮ

19Telasanga1
Published on

ತೆಲಸಂಗ: ಅಥಣಿ ತಾಲೂಕಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳ ಪ್ರತಿನಿಧಿ ಕ್ಷೇತ್ರದ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಭರ್ಜರಿ ಜಯ ಸಾಧಿಸಿದ್ದು, ತೆಲಸಂಗ, ಬನ್ನೂರ, ಕನ್ನಾಳ, ಕೊಟ್ಟಲಗಿ, ಹಾಲಳ್ಳಿ, ಕಕಮರಿ ಸೇರಿ ತೆಲಸಂಗ ಹೋಬಳಿ ಗ್ರಾಮಗಳಿಂದ ಅಭಿಮಾನಿಗಳು ಬೆಳಗಾವಿಯಲ್ಲಿ ಭಾನುವಾರ ವಿಜಯೋತ್ಸವ ಆಚರಿಸಿದರು.

ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೋಘಸಿದ್ಧ ಖೊಬ್ರಿ ಮಾತನಾಡಿ, ಲಕ್ಷ್ಮಣ ಸವದಿ ಕೇವಲ ರಾಜಕಾರಣಿಯಲ್ಲ, ಅವರು ರೈತರ ಜೀವನಾಡಿ. ಪಿಕೆಪಿಎಸ್‌ಗಳ ಮೂಲಕ ರಾಜ್ಯಾದ್ಯಂತ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುವಂತೆ ಮಾಡಿ, ರೈತರ ಶಕ್ತಿ ಹೆಚ್ಚಿಸಿ ಆರ್ಥಿಕ ಅಭಿವೃದ್ಧಿಗಾಗಿ ಹಗಲಿರುಳು ದುಡಿದಿದ್ದಾರೆ. ಲಕ್ಷ್ಮಣ ಸವದಿ ವಿರುದ್ಧ ಅಪವಾದ ಮಾಡುವವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ಮಾಜಿ ತಾಪಂ ಸದಸ್ಯ ಶ್ರಿಶೈಲ ಶೆಲ್ಲೆಪ್ಪಗೋಳ, ಮುಖಂಡರಾದ ಶಿವು ತೇಲಿ, ರಮೇಶ ಗಣಿ, ಗುರುರಾಜ ಕಾಮನ್, ಯಂಕಣ್ಣ ಅಸ್ಕಿ, ಶೇಖರ ವಳಸಂಗ, ಆದಮ್ ಮುಜಾವರ, ಬುಡ್ಡ ಮುಜಾವರ, ಗುರಾನ್ ಅರಟಾಳ, ಆನಂದ ಥೈಕಾರ್, ಬಸು ಗಲಗಲಿ, ಶಿವಲಿಂಗ ಬೆವನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net