ಕಾಂಗ್ರೆಸ್‌ಗೆ ಕಾರ್ಯಕರ್ತರೇ ಆಧಾರಸ್ತಂಭ

01
ಹೊಳೆನರಸೀಪುರ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷೆ ವೀಣಾ ಅಚ್ಚಯ್ಯ ಮಾತನಾಡಿದರು. ಜಿಲ್ಲಾಧ್ಯಕ್ಷ ಇ.ಎಚ್.ಲಕ್ಷ್ಮಣ್, ಮೀನಾಜ್, ಪ್ರವೀಣ್, ಪನ್ನೀರ್ ಮೈನಾ, ಎಚ್.ಟಿ.ಲಕ್ಷ್ಮಣ್ ಇದ್ದರು
Published on

ಹೊಳೆನರಸೀಪುರ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆಯುವುದರ ಮೂಲಕ ಕೋಟ್ಯಂತರ ಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಸವಲತ್ತುಗಳನ್ನು ಉಚಿತವಾಗಿ ಒದಗಿಸಿಕೊಟ್ಟಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷೆ ವೀಣಾ ಅಚ್ಚಯ್ಯ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಆಧಾರ ಸ್ತಂಭವಾಗಿದ್ದು ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಮತ್ತು ಬದ್ಧತೆಯಿಂದ ಪಕ್ಷದ ಬೆಳವಣಿಗೆಗಾಗಿ ಶ್ರಮಿಸಿದಾಗ ಮಾತ್ರ ಅವರನ್ನು ಪಕ್ಷದ ವರಿಷ್ಠರು ಗಣನೆಗೆ ತೆಗೆದುಕೊಳ್ಳುವುದರ ಮೂಲಕ ಅವರಿಗೆ ಪಕ್ಷದ ವತಿಯಿಂದ ಮತ್ತು ಸರ್ಕಾರದ ಹಂತದಲ್ಲಿ ಸೂಕ್ತ ಸ್ಥಾನಮಾನಗಳನ್ನು ಒದಗಿಸಿಕೊಡಲು ಮುಂದಾಗುತ್ತಾರೆ ಎಂದು ನುಡಿದರು.

ಹಾಸನ ಸಂಸದ ಶ್ರೇಯಸ್‌ಎಂ.ಪಟೇಲ್ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರ ನೋವುಗಳಿಗೆ ಸ್ಪಂದಿಸುತ್ತಿದ್ದಾರೆ. ಇಂಥ ಯುವ ನಾಯಕರು ಪಕ್ಷಕ್ಕೆ ಪ್ರಮುಖ ಆಸ್ತಿಯಾಗಿದ್ದಾರೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಎಚ್.ಲಕ್ಷ್ಮಣ್, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮೀನಾಜ್ ಪ್ರವೀಣ್, ಪನ್ನೀರ್ ಮೈನಾ, ಮುಖಂಡರಾದ ಮಂಜುನಾಥ್ ಶರ್ಮ, ಚಂದ್ರಶೇಖರ್, ಅಶೋಕ್, ಸ್ಥಳೀಯ ಪ್ರಮುಖರಾದ ಬೀಚನಹಳ್ಳಿ ಬಸವರಾಜು, ಹರದನಹಳ್ಳಿ ಪುಟ್ಟರಾಜು, ಮಾರಗೌಡನಹಳ್ಳಿ ರವಿ ಕುಮಾರ್, ಎಲ್.ಡಿ.ಬಸವರಾಜು, ಗೊಂದಿ ಮಲ್ಲೆನಹಳ್ಳಿ ಶಿವಕುಮಾರ್, ಲಲಿತಾ, ಪಾರ್ವತಿ, ಕಟ್ಟೆ ಬೆಳಗುಲಿ ಬಾಬು, ಉದಯ್ ಕುಮಾರ್, ಹರಿಹರಪುರ ಗಿರೀಶ್, ಮಹೇಶ್, ಕೋಡಿಹಳ್ಳಿ ಚಂದು, ಗೋವಿಂದರಾಜು, ವೀರಭದ್ರ, ರಂಗಸ್ವಾಮಿ, ರವಿ, ನಾಗಲಾಪುರ ಯೋಗೇಶ್, ಮಂಜುನಾಥ್, ಬಾಬರ್ ಅಲಿ, ಜಿಷನ್, ರಂಗಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net