

ನಾಲತವಾಡ: ಬಿಸಿಲು, ಮಳೆ, ಗಾಳಿ ಎನ್ನದೆ ನಿರಂತರ ಶ್ರಮ ಪಡುತ್ತಿರುವ ಕಾರ್ಮಿಕರು ಶ್ರಮ ಜೀವಿಗಳು ಎಂದು ತಾಲೂಕು ಕಾರ್ಮಿಕ ಸಂಘದ ಅಧ್ಯಕ್ಷ ಮಣಿಕಂಠ ಮಲ್ಲು ಗಂಗನಗೌಡ್ರ ಹೇಳಿದರು.
ಬಜಾರದಲ್ಲಿನ ಬಸವೇಶ್ವರ ವೃತ್ತದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂದರು.
ಎಂ.ಎಸ್. ಪಾಟೀಲ, ಕೆಂಚಪ್ಪಣ್ಣ ಬಿರಾದಾರ, ಪಿ.ಜಿ. ಬಿರಾದಾರ, ಮಹಾಂತೇಶ ಗಂಗನಗೌಡ್ರ, ಸಂಗಣ್ಣ ಹಾವರಗಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಇಳಕಲ್ಲ, ಬಸವರಾಜ ಗಂಗನಗೌಡ್ರ ಗಡ್ಡಿ, ಕಾರ್ಮಿಕ ಸಂಘಟನೆಯ ಅಮರಪ್ಪ ಗಂಗನಗೌಡ್ರ, ಶರಣಪ್ಪ ಇಳಕಲ್ಲ, ನಾಗರಾಜ ಗಡ್ಡಿಗೌಡ್ರ, ಹುಲಗಪ್ಪ ಹಳ್ಳಿ, ರಫೀಕ ಹಣಗಿ, ಬಸವರಾಜ ಹೂಗಾರ, ಮಲ್ಲು ಕಾಟಿ, ಮಲ್ಲು ಮೇಟಿ, ಮಲ್ಲಪ್ಪ ಹುಡೇದ, ಮುತ್ತಣ್ಣ ಗಂಗನಗೌಡ್ರ, ಅಬ್ದುಲ್ ಮೇಸಿ, ಬರಕತ ಜುಮಾಲಪುರ ಪಾಲ್ಗೊಂಡಿದ್ದರು.