ಕಾರ್ಮಿಕರು ದುಡಿಮೆಯೊಂದಿಗೆ ಆರೋಗ್ಯಕ್ಕೂ ಮಹತ್ವ ನೀಡಲಿ

11 Jaggu 3
ಹುಲ್ಯಾನೂರ ಗ್ರಾಮದ ಹೊಸ ಕೆರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಯಶವಂತಕುಮಾರ ಮಾತನಾಡಿದರು. ಗೋಪಾಲ ಗೂಡಸಿ, ಮುರುಗೇಶ ಯಕ್ಕಂಚ್ಚಿ ಇತರರಿದ್ದರು.
Published on

ಬೆಳಗಾವಿ: ದುಡಿಮೆ ಜತೆಗೆ ಕೂಲಿ ಕಾರ್ಮಿಕರರು ಆರೋಗ್ಯ ರಕ್ಷಣೆಗೂ ಹೆಚ್ಚಿನ ಮಹತ್ವ ನೀಡಬೇಕು. ವೈಯಕ್ತಿಕ ಕಾಳಜಿ ವಹಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ ಸಲಹೆ ನೀಡಿದರು.

ತಾಲೂಕಿನ ಕಲಖಾಂಬ ಗ್ರಾಪಂ ವ್ಯಾಪ್ತಿಯ ಹುಲ್ಯಾನೂರ ಗ್ರಾಮದ ಹೊಸ ಕೆರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಜಿಪಂ, ತಾಪಂ, ಗ್ರಾಪಂ ಹಾಗೂ ಆರೋಗ್ಯ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ದೇಶಿಸಿ ಅವರು ಮಾತನಾಡಿ, ಕಾರ್ಮಿಕರಿಗೆ ಕುಟುಂಬದ ಜವಾಬ್ದಾರಿ ಹೆಚ್ಚಿರುತ್ತದೆ. ಹಾಗಾಗಿ ದುಡಿಮೆಯ ಸ್ವಲ್ಪ ಹಣ ಆರೋಗ್ಯ ಕಾಪಾಡಿಕೊಳ್ಳಲು ಖರ್ಚು ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಯಕ್ಕೆ ಸರಿಯಾಗಿ ಊಟೋಪಚಾರ ಮಾಡಿಕೊಂಡು ಆರೋಗ್ಯವಂತರಾಗಿ ಬಾಳಬೇಕು. ನೀರನ್ನು ಕಾಯಿಸಿ, ಆರಿಸಿ ಕುಡಿಯಬೇಕು. ಇದರಿಂದ ಜ್ವರ, ಕೆಮ್ಮು ಹಾಗೂ ಶೀತಗಳಂತಹ ರೋಗಗಳು ಬರುವುದಿಲ್ಲ. ಜತೆಗೆ ಹಣ್ಣು ತರಕಾರಿಗಳನ್ನು ಹೆಚ್ಚು ಬಳಸಬೇಕು ಎಂದು ವಿವರಿಸಿದರು. ಪಿಡಿಒ ಗೋಪಾಲ ಗೂಡಸಿ, ತಾಂತ್ರಿಕ ಸಂಯೋಜಕ ಮುರುಗೇಶ ಯಕ್ಕಂಚ್ಚಿ, ಐಇಸಿ ಸಂಯೋಜಕ ರಮೇಶ ಮಾದರ, ಕಾಯಕ ಮಿತ್ರರು, ಬಿಎಫ್‌ಟಿ, ಗ್ರಾಪಂ ಮತ್ತು ವೈದ್ಯಕೀಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net