ಕಣಜದ ಹುಳು ಕಚ್ಚಿ ಕಾರ್ಮಿಕ ಮೃತ್ಯು

Pilikoodel
Published on

ಪುತ್ತೂರು ಗ್ರಾಮಾಂತರ: ಮನೆ ಪಕ್ಕದ ಗುಡ್ಡಕ್ಕೆ ಕಟ್ಟಿಗೆಗೆ ತೆರಳಿದ್ದ ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ ಗುರುವ(55) ಎಂಬುವರು ಕಣಜದ ಹುಳಗಳು(ಪಿಲಿಕುಡೋಲು) ಕಚ್ಚಿದ ಪರಿಣಾಮ ಮೃತಪಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ ಗುಡ್ಡಕ್ಕೆ ತೆರಳಿದ್ದ ಗುರುವ ಅವರಿಗೆ ಕಣಜದ ಹುಳಗಳು ಕಚ್ಚಿತ್ತು. ಮುಖ, ಕುತ್ತಿಗೆ ಮತ್ತು ದೇಹದ ಭಾಗ ಊದಿಕೊಂಡಿದ್ದ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net