ವಿದ್ಯುತ್ ಶಾಕ್‌ನಿಂದ ಕಾರ್ಮಿಕ ಸಾವು

Current
Published on

ಬ್ಯಾಡಗಿ: ಧ್ವಜದ ಕಂಬ ಅಳವಡಿಸುವ ವೇಳೆ ವಿದ್ಯುತ್ ತಂತಿ ತಗುಲಿ ಕಟ್ಟಡ ಕಾರ್ಮಿಕ ಮೃತಪಟ್ಟ ಘಟನೆ ಘಾಳಪೂಜಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಶಂಕ್ರಪ್ಪ ಜಾಡರ (43) ಮೃತಪಟ್ಟ ಕಾರ್ಮಿಕ.

ಗ್ರಾಮದಲ್ಲಿ ವಿಎಸ್‌ಎಸ್ ಬ್ಯಾಂಕ್‌ನ ಹೊಸ ಕಟ್ಟಡ ನಿರ್ಮಿಸಲಾಗಿದೆ. ಆವರಣದಲ್ಲಿ ಧ್ವಜದ ಕಂಬ ಅಳವಡಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಕಂಬ ಬಡಿದು ಶಾಕ್ ತಗುಲಿ ಶಂಕ್ರಪ್ಪ ಸಾವಿಗೀಡಾಗಿದ್ದಾನೆ. ಮತ್ತೊಬ್ಬ ಕಾರ್ಮಿಕ ಮಹರಾಜ ಜಾಡರ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net