

ಕಾಸರಗೋಡು: ಮನೆಯಿಂದ ಕೆಲಸಕ್ಕೆ ತೆರಳಿದ್ದ ಇಡಯಿಲಕ್ಕಾಡ್ ಎಕೆಜಿ ಜಂಕ್ಷನ್ ಸನಿಹದ ನಿವಾಸಿ ಓ.ಪವಿತ್ರನ್(54) ಎಂಬುವರ ಮತದೇಹ ಆಯಿತ್ತಿ ವದ್ಧ ಮಂದಿರದ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎಂದಿನಂತೆ ಮನೆಯಿಂದ ಕೆಲಸಕ್ಕೆ ತೆರಳಿದ್ದವರು ರಾತ್ರಿಯಾದರೂ ವಾಪಸಾಗದ ಹಿನ್ನೆಲೆಯಲ್ಲಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಹುಡುಕಾಡುವ ವೇಳೆ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.