ಕ್ರಿಮಿನಾಶಕ ಸೇವಿಸಿ ಕಾರ್ವಿುಕ ಆತ್ಮಹತ್ಯೆ

Crime Logo
Published on

ನರಗುಂದ: ಹೊಟ್ಟೆ ನೋವು ತಾಳಲಾರದೇ ವ್ಯಕ್ತಿಯೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ.

ನಗರದ ಎನ್​ಎಚ್​ಟಿ ಮಿಲ್ ಕ್ವಾಟರ್ಸ್ ಬಡಾವಣೆ ಸಂಗಪ್ಪ ಯಚ್ಚರಪ್ಪ ಜಾಲಿಹಾಳ (55) ಮೃತ ದುರ್ದೈವಿ. ಹಮಾಲಿ ಕೂಲಿ ಕಾರ್ವಿುಕನಾಗಿದ್ದ ಸಂಗಪ್ಪನಿಗೆ ಹಾರ್ಟ್ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅಲ್ಲದೆ, ಆಗಾಗ ವಿಪರೀತ ಹೊಟ್ಟೆ ನೋವು ಕಾಡುತ್ತಿತ್ತು. ಇದನ್ನೇ ಮನಸಿಗೆ ಹಚ್ಚಿಕೊಂಡು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪತ್ನಿ ರೇಣವ್ವ ನರಗುಂದ ಠಾಣೆಗೆ ದೂರು ನೀಡಿದ್ದಾರೆ.

ಎಎಸ್​ಐ ಪಿ.ಎಂ. ದೊಡಮನಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net