

ಹುಬ್ಬಳ್ಳಿ : ಇಲ್ಲಿನ ಉಣಕಲ್ನ ವಾರ್ಡ್ ನಂ. 36, 37 ಹಾಗೂ 38 ರ ಉಣಕಲ್ ಕ್ರಾಸ್ದಿಂದ ಪ್ರೆಸಿಡೆಂಟ್ ಹೋಟೆಲ್ ಹೊರಗಿನ ಕಾಂಕ್ರಿಟ್ ರಸ್ತೆಯ ಕಾಮಗಾರಿ ಹಾಗೂ ಬಾಕಿ ಇರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರು ನಗರದಲ್ಲಿ ಶನಿವಾರ ನಡೆಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಲೋಕೋಪಯೋಗಿ ಇಲಾಖೆ, ಎಲ್ ಎಂಡ್ ಟಿ, ಒಳಚರಂಡಿ, ಹೆಸ್ಕಾಂ, ಮಹಾನಗರ ಪಾಲಿಕೆ ಅಧಿಕಾರಿಗಳ, ಭೂ ಮಾಪನಾ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಶಾಸಕ ಮಹೇಶ ಟೆಂಗಿನಕಾಯಿ, ಕಳೆದ ಸಭೆಯಲ್ಲಿ ನೀಡಿದ್ದ ಸೂಚನೆಗಳು ಅನುಷ್ಠಾನಗೊಂಡಿರುವ ಕುರಿತು ಪ್ರಶ್ನಿಸಿದರು.
ಸಾರ್ವಜನಿಕರ ಸುಮಾರು 37 ಗುಂಟೆ ಖಾಸಗಿ ಭೂಮಿಯನ್ನು ಈಗಾಗಲೇ ವಶಪಡೆಸಿಕೊಳ್ಳಲಾಗಿದೆ. ಆ ಆಸ್ತಿಗಳಗೆ ಪರಿಹಾರವನ್ನು ಮಹಾನಗರ ಪಾಲಿಕೆಯೇ ಭರಿಸಬೇಕು ಎಂದು ಸೂಚಿಸಿದರು.
ಈ ಮುಖ್ಯ ರಸ್ತೆಯಲ್ಲಿ ವಾಹನ ಓಡಾಟ ಹೆಚ್ಚು ಇದ್ದು, ಕೂಡಲೇ ಕೆಲಸ ಪ್ರಾರಂಭಿಸಿ ಜನರಿಗೆ ಅನುಕೂಲ ಮಾಡಬೇಕು ಎಂದು ತಿಳಿಸಿದರು.
ಸೆ. 22 ರಂದು ಮತ್ತೆ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಹಾಜರಿರುವಂತೆ ಸೂಚನೆ ನೀಡಿದರು.
ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಉಮೇಶಗೌಡ ಕೌಜಗೇರಿ, ರಾಜಣ್ಣ ಕೋರವಿ, ಉಮೇಶಗೌಡ ಕೌಜಗೇರಿ, ತಿಪ್ಪಣ್ಣ ಮಜ್ಜಗಿ, ಆಯುಕ್ತ ಈಶ್ವರ ಉಳ್ಳಾಗಡಿ, ತಹಶೀಲ್ದಾರ ಕಲ್ಲನಗೌಡ ಪಾಟೀಲ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.