

ನರಗುಂದ: ತಾಲೂಕಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಯಾವುದೇ ರೀತಿಯ ಪೌಷ್ಟಿಕ ಆಹಾರಗಳ ಕೊರತೆಯಾಗದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2022-23ನೇ ಸಾಲಿನ ಪೂರಕ 20 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಹೊರಕೇರಿ, ಮೆಣಸಿನಕಾಯಿ ಓಣಿಯಲ್ಲಿ ನಿರ್ವಿುತಿ ಕೇಂದ್ರದಿಂದ ನಿರ್ವಿುಸಿರುವ 2 ಹೊಸ ಅಂಗನವಾಡಿ ಕಟ್ಟಡಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಗಳು ಪೂರಕ ಪೌಷ್ಟಿಕ ಆಹಾರ ವಿತರಿಸುವ ಜತೆಗೆ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಸುಂದರ ವಾತಾವರಣ ಹೊಂದಿರಬೇಕು. ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವನಾಗಿದ್ದ ವೇಳೆ ಭಾಗ್ಯಲಕ್ಷ್ಮಿ ಹಾಗೂ ಬಾಲ ಸಂಜೀವಿನಿ ಯೋಜನೆ ಜಾರಿಗೆ ತಂದಿದ್ದೇನೆ. ಬಾಲಸಂಜೀವಿನಿ ಯೋಜನೆಯಡಿ ಹುಟ್ಟಿನಿಂದ 3 ವರ್ಷದ ಯಾವುದೇ ಮಗುವಿಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೆ ಅವರಿಗೆ ಸರ್ಕಾರದಿಂದ ನೇರವಾಗಿ 50 ಸಾವಿರ ರೂ. ಹಣ ಪಾವತಿಸುವ ಮಹತ್ವಾಕಾಂಕ್ಷಿ ಯೋಜನೆ ತಂದು ಬಡವರ ಸೇವೆ ಸಲ್ಲಿಸಿರುವ ಸಂತೃಪ್ತಿ ನನಗಿದೆ. ಭಾಗ್ಯಲಕ್ಷ್ಮಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ 1 ಲಕ್ಷ ರೂಪಾಯಿವರೆಗೆ ಬಾಂಡ್ ನೀಡಲಾಗಿತ್ತು. 18 ವರ್ಷ ಪೂರೈಸಿದ ಅರ್ಹ ಫಲಾನುಭವಿಗಳಿಗೆ ಮೆಚ್ಯೂರಿಟಿ ಹಣ ನೀಡಲು ತಾಲೂಕು ಮಟ್ಟದಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಸಿಡಿಪಿಒ ಕಮಲಾ ಹುಲಕೋಟಿ ಅವರಿಗೆ ಸೂಚಿಸಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣಾ ಯಲಿಗಾರ, ಉಪಾಧ್ಯಕ್ಷೆ ಕಾಶಮ್ಮ ಮಳಗಿ, ಚಂಬಣ್ಣ ವಾಳದ, ಬೂದಪ್ಪ ಯಲಿಗಾರ, ದಾವಲಸಾಬ್ ಮುಳಗುಂದ, ನಿರ್ವಿುತಿ ಕೇಂದ್ರದ ಯೋಜನಾ ಇಂಜಿನಿಯರ್ ವಿನಾಯಕ ಕಲಾಲ, ಚಂದ್ರಗೌಡ ಪಾಟೀಲ, ಸುನೀಲ ಕುಷ್ಟಗಿ, ಎಸ್.ಆರ್. ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ಬೀರಪ್ಪ ಬಿದರಗಡ್ಡಿ, ರಿಯಾಜ್ ಕೊಣ್ಣೂರ, ಮಾಬುಸಾಬ್ ಹಂಪಿಹೊಳಿ, ಅಡಿವೆಪ್ಪ ಮೆಣಸಿನಕಾಯಿ, ಮಂಜುನಾಥ ಸವದತ್ತಿ, ಮಂಜುನಾಥ ಯಲಿಗಾರ, ಸೈದುಸಾಬ್ ಬಿಚಗತ್ತಿ, ರಾಜೇಶ್ವರಿ ಹವಾಲ್ದಾರ, ಶಕುಂತಲಾ ಗಣಿ, ಬಿ.ಎಸ್. ಹುಲಕುಂದ, ಕಿರಣ ಮುಧೋಳೆ, ಸಿದ್ದೇಶ ಹೂಗಾರ, ವಿಠ್ಠಲ ಹವಾಲ್ದಾರ, ಹನುಮಂತ ಹವಾಲ್ದಾರ, ಸಿದ್ದಪ್ಪ ಯಲಿಗಾರ, ಬಸವರಾಜ ಮಳಗಿ, ವಿವಿಧ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉಪಸ್ಥಿತರಿದ್ದರು. ಪೋಷಣ ಅಭಿಯಾನ ಸಂಯೋಜಕ ಮಂಜುನಾಥ ಗುಗ್ಗರಿ ಕಾರ್ಯಕ್ರಮ ನಿರ್ವಹಿಸಿದರು.