ಮಾದಕ ವಸ್ತುಗಳ ಬಳಕೆ ತಡೆಗೆ ಶ್ರಮಿಸಿ

alm 26-1
Published on

ಆಲಮೇಲ: ಮಾದಕ ವಸ್ತುಗಳ ವ್ಯಸನ ಗಂಭೀರ ಸಮಸ್ಯೆಯಾಗಿದ್ದು, ಇದನ್ನು ತಡೆಗಟ್ಟಿ ಸುಂದರ, ಸುಸಜ್ಜಿತ ಸಮಾಜ ನಿರ್ಮಿಸಲು ಯುವಕರು ಮುಂದೆ ಬರಬೇಕೆಂದು ಪಿಎಸ್‌ಐ ಅರವಿಂದ ಅಂಗಡಿ ಸಲಹೆ ನೀಡಿದರು.

ಪಟ್ಟಣದಲ್ಲಿ ಗುರುವಾರ ವಿಜಯಪುರ ಜಿಲ್ಲಾ ಪೊಲೀಸ್, ಇಂಡಿ ಉಪ ವಿಭಾಗ, ಆಲಮೇಲ ಪೊಲೀಸ್ ಠಾಣೆ ವತಿಯಿಂದ ವಿವಿಧ ಶಾಲೆಗಳ ಸಹಯೋಗದಲ್ಲಿ ಮಾದಕ ವಸ್ತುಗಳ ಉಪಯೋಗ ಮತ್ತು ಸಾಗಣೆ ವಿರುದ್ಧ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಬಾಲ್ಯ ವಿವಾಹ ಸೈಬರ್ ಅಪರಾಧ ತಡೆಗಟ್ಟುವಿಕೆ, ರಸ್ತೆ ಸುರಕ್ಷತೆ ಕುರಿತಾದ ಕ್ರಮಗಳು, ಕಾನೂನು ಅರಿವು ಜತೆಗೆ ಮಕ್ಕಳ ಸಹಾಯವಾಣಿ 1098, ಮಹಿಳೆಯರ ರಕ್ಷಣೆಯ 1091 ಫೋನ್ ಸಂಖ್ಯೆ ಕುರಿತು ಜಾಗೃತಿ ಮೂಡಿಸುವುದೆ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಸಿಬ್ಬಂದಿ ಸಿದ್ದರಾಯ ಪಾಟೀಲ, ಶಾಲಾ ಶಿಕ್ಷಕರು, ಶಿಕ್ಷಕಿಯರು ಹಾಗೂ ಮಕ್ಕಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net