ಸ್ವಯಂಚಾಲಿತ ಬೀದಿದೀಪ ಅಳವಡಿಸುವ ಕಾಮಗಾರಿಗೆ ಚಾಲನೆ

ಸಕಲೇಶಪುರ ತಾಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಣದಹೊಳೆ ಗ್ರಾಮದಲ್ಲಿ ಸ್ವಯಂಚಾಲಿತ ಬೀದಿದೀಪ  ಅಳವಡಿಸುವ ಕಾಮಗಾರಿಗೆ  ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ ನೆರವೇರಿಸಿದರು.
ಸಕಲೇಶಪುರ ತಾಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಣದಹೊಳೆ ಗ್ರಾಮದಲ್ಲಿ ಸ್ವಯಂಚಾಲಿತ ಬೀದಿದೀಪ ಅಳವಡಿಸುವ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ ನೆರವೇರಿಸಿದರು.
Published on

ಸಕಲೇಶಪುರ: ಹೆಬ್ಬಸಾಲೆ ಗ್ರಾಮ ಪಂಚಾಯಿತಿಯನ್ನು ಮಾದರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಹೊಂಬೆಳಕು ಯೋಜನೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಣದಹೊಳೆ ಗ್ರಾಮದಲ್ಲಿ ಹೊಂಬೆಳಕು ಯೋಜನೆಯಡಿ ಸ್ವಯಂಚಾಲಿತ ಬೀದಿದೀಪಗಳನ್ನು ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸ್ವಯಂಚಾಲಿತ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಪಂಚಾಯಿತಿ ವ್ಯಾಪ್ತಿಯ 6 ಕಂದಾಯ ಗ್ರಾಮಗಳು ಮತ್ತು 38 ಉಪ ಗ್ರಾಮಗಳ ವ್ಯಾಪ್ತಿಯಲ್ಲಿ ಸ್ವಯಂಚಾಲಿತ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಇದರಿಂದ ಬೀದಿ ದೀಪಗಳನ್ನು ಹಾಕಲು ಹಾಗೂ ಆರಿಸಲು ಕಾರ್ಮಿಕರು ಹೋಗುವುದು ತಪ್ಪುತ್ತದೆ. ಒಟ್ಟು 95 ವಿದ್ಯುತ್ ಕಂಬಗಳನ್ನು 53 ಕಿಮೀ ವ್ಯಾಪ್ತಿಯಲ್ಲಿ ಅಳವಡಿಸಲಾಗುತ್ತಿದೆ. ಈ ಕಾಮಗಾರಿಗೆ ಒಟ್ಟು ಸುಮಾರು 65 ಲಕ್ಷ ರೂ. ವಿನಿಯೋಗಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರ ಪಂಚಾಯತಿಗಳಲ್ಲೂ ಈ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದರು.

ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಅರ್ಜುನ್, ಸಹಾಯಕ ಇಂಜಿನಿಯರ್‌ಗಳಾದ ಹರೀಶ್, ನಿರಂಜನ್, ಹೆಬ್ಬಸಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ಮೇಘರಾಜ್, ಸದಸ್ಯರಾದ ಕಾರ್ತಿಕ್, ಶಿವಕುಮಾರಿ, ಮಹೇಶ್ ಶೆಟ್ಟಿ, ಭಾಗ್ಯ, ಬಿಜೆಪಿ ಮುಖಂಡರಾದ ಮಹಡಿಮನೆ ಪ್ರಶಾಂತ್, ಮೇಘರಾಜ್, ನಿಶಾಂತ್, ಭೂಷಣ್, ರವಿ, ಬಾಬ್ಬಿ, ದುರ್ಗಪ್ಪ ಶೆಟ್ಟಿ, ಪಿಡಿಒ ಮೊಹಮ್ಮದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net