

ಸಿಂಧನೂರು: ಗುಣಮಟ್ಟದ ಸೇತುವೆ ನಿರ್ಮಿಸಿಕೊಳ್ಳುವಲ್ಲಿ ಸಾರ್ವಜನಿಕರ ಪಾತ್ರ ಪ್ರಮುಖವಾಗಿದ್ದು, ಕಾಮಗಾರಿ ಕಳಪೆಯಾಗದಂತೆ ಎಚ್ಚರ ವಹಿಸಬೇಕೆಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತುರ್ವಿಹಾಳದ ಮಧ್ಯ ಕ್ಯಾಂಪ್‌ನಲ್ಲಿ ಕೆಕೆಆರ್‌ಡಿಬಿಯ ಒಂದು ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಂಗಳವಾರ ಮಾತನಾಡಿದರು. ಈ ಸೇತುವೆ ಜನರ ಬಹುದಿನದ ಬೇಡಿಕೆಯಾಗಿದ್ದು, ಈಗ ಈಡೇರಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಿ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ರಸ್ತೆ ಅಭಿವೃದ್ಧಿಗೂ ಅನುದಾನ ನೀಡಲಾಗಿದೆ ಎಂದರು.
ಪಿಡಬ್ಲ್ಯುಡಿ ಎಇ ದುರುಗಪ್ಪ, ಪ್ರಮುಖರಾದ ನೆಕ್ಕಂಟಿ ವಾಸು, ಪಿ.ವೆಂಕಟೇಶ್ವರರಾವ್, ಸಿ.ಎಚ್.ನರೇಂದ್ರ, ಬಾಬುಗೌಡ ದೇವರಮನಿ, ಬಸವರಾಜ ಸಿಂಧನೂರು ಇತರರು ಇದ್ದರು.