ಕಾಯಕ ತತ್ವದಡಿ ಪೌರ ಕಾರ್ಮಿಕರ ಕೆಲಸ

PH 03
Published on

ವಾಡಿ: ಬಸವಾದಿ ಶರಣರ ಆಶಯದಂತೆ ಕಾಯಕದಲ್ಲೇ ಕೈಲಾಸ ಕಾಣುತ್ತಿರುವ ಪೌರ ಕಾರ್ಮಿಕರೇ ಗೌರವಕ್ಕೆ ಅರ್ಹರು ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ಫಕ್ರುದ್ದಿನ್ ಸಾಬ್ ಹೇಳಿದರು.

ಘನತ್ಯಾಜ್ಯ ವಿಲೇವಾರಿ ಘಟಕ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸೂರ್ಯೋದಯಕ್ಕೂ ಮುನ್ನ ಎದ್ದು ಬೀದಿ, ಗಲ್ಲಿ, ರಸ್ತೆಗಳನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯ ಕಾಪಾಡುವ ಮಹಾನ್ ಕಾರ್ಯ ಪೌರ ಕಾರ್ಮಿಕರು ಮಾಡುತ್ತಾರೆ. ಅತ್ಯಂತ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ದುಡಿಯುವ ವರ್ಗ ಇದಾಗಿದೆ ಎಂದು ಬಣ್ಣಿಸಿದರು.

ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ ಮಾತನಾಡಿದರು. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವಲಯ ಅಧ್ಯಕ್ಷ ಶಿವಾನಂದ ನಿಂಬರ್ಗಾ, ಪುರಸಭೆ ಆರೋಗ್ಯ ನಿರೀಕ್ಷಕಿ ಲತಾಮಣಿ, ಪ್ರಮುಖರಾದ ಬಸವರಾಜ ಪೂಜಾರಿ, ಕೆ.ವಿರೂಪಾಕ್ಷ, ಮನೋಜಕುಮಾರ ಹಿರೋಳ್ಳಿ, ಶ್ರೀಮಂತ ಧುಮ್ಮನಸೂರ, ವಿಶ್ವನಾಥ ಭಾಗೋಡಿ, ಬಸಮ್ಮ, ಜ್ಯೋತಿ, ಶಿವಕಾಂತಾ, ಪ್ರಭಾಕರ, ರೇಣುಕಾ ಪ್ರಧಾನಿ ಇತರರಿದ್ದರು.

ಉದಯಕುಮಾರ ಯಾದಗಿರಿ ನಿರೂಪಣೆ ಮಾಡಿದರು. ಪೂಜಾ ಫುಲಾರೆ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೌರ ಕಾರ್ಮಿಕರು ಮತ್ತು ಸಿಬ್ಬಂದಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net