

ಇಳಕಲ್ಲ: ನಗರಸಭೆ ನೂತನ ಅಧ್ಯಕ್ಷ- ಉಪಾಧ್ಯಕ್ಷರು ಪಕ್ಷಾತೀತ, ಜಾತ್ಯತೀತವಾಗಿ ಕಾರ್ಯನಿರ್ವಹಿಸಿ ನಗರ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕಾಂಗ್ರೆಸ್ ಮುಖಂಡ ಶರಣಪ್ಪ ಆಮದಿಹಾಳ ಹೇಳಿದರು.
ಇಳಕಲ್ಲ ನಗರಸಭೆಯಲ್ಲಿ ಶ್ರಾವಣ ಶುಕ್ರವಾರ ನೂತನ ಅಧ್ಯಕ್ಷೆ ಸುಧಾರಾಣಿ ಸಂಗಮ, ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ಅವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಮಾತನಾಡಿ, ನಗರದ ಎಲ್ಲ ವಾರ್ಡ್‌ಗಳಲ್ಲಿ ಮೂಲ ಸೌಲಭ್ಯ ಒದಗಿಸಿ ಜನರ ಸಮಸ್ಯೆಗಳಿಗೆ ಧ್ವನಿಯಾಗುವುದಾಗಿ ಭರವಸೆ ನೀಡಿದರು. ಬಸವನಗರ ಬಡಾವಣೆ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಾಂಗ್ರೆಸ್ ಹಿರಿಯ ಮುಖಂಡರಾದ ಅರುಣ ಬಿಜ್ಜಲ್, ಶರಣಪ್ಪ ಆಮದಿಹಾಳ, ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ, ಅಮೃತ ಬಿಜ್ಜಲ್, ಶರಣಪ್ಪ ಅಮರಾವತಿ, ಹನುಮಂತ ತುಂಬದ, ಸದಾಶಿವ ಕನಕೇರಿ, ವೀಣಾ ಅರಳಿಕಟ್ಟಿ, ಲಕ್ಷ್ಮೀಬಾಯಿ ಹಾದಿಮನಿ, ರೇಷ್ಮಾ ಮಾರನಬಸರಿ, ಆಪ್ರೀನ್ ಸೋನಾರ, ನಜ್ಮಾ ಬೇಗಂ ರಾಜಾಸಾಬ್ ಬನ್ನಿಗೋಳ, ಶರಣಮ್ಮ ತಿಮ್ಮಾಪೂರ, ಮುಖಂಡರಾದ ವಿಠ್ಠಲ ಜಕ್ಕಾ, ಯಲ್ಲಪ್ಪ ಪೂಜಾರಿ, ಅಂಬು ಚಲವಾದಿ, ಮುರುಗೇಶ ಸಂಗಮ, ಮಹಿಳಾ ಮುಖಂಡರಾದ ಸಂಗೀತಾ ಮಡಿವಾಳರ, ಜಯಲಕ್ಷ್ಮೀ ಯಂಗಾಲಿ, ಮಂಜುಳಾ ಗರಡಿಮನಿ, ನಜ್ಮಾ ಮೂಗನೂರ, ಮದಿನಾ ಮುದಗಲ್, ಶಮ್ಮಾ ಚಳಗಿ, ಸುವರ್ಣ ಪಲೇದ, ಸುವರ್ಣ ಓತಗೇರಿ ಇತರರಿದ್ದರು.
ಫೋಟೋ : ಐಎಲ್‌ಕೆ 23-1
ಇಳಕಲ್ಲ ನಗರ ಸಭೆಯಲ್ಲಿ ಶುಕ್ರವಾರ ನೂತನ ಅಧ್ಯಕ್ಷೆ ಸುಧಾರಾಣಿ ಸಂಗಮ, ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ಅವರ ಪದಗ್ರಹಣ ಸಮಾರಂಭ ನಡೆಯಿತು. ಕಾಂಗ್ರೆಸ್ ಪಕ್ಷದ ಮುಖಂಡ ಶರಣಪ್ಪ ಆಮದಿಹಾಳ, ಅರುಣ ಬಿಜ್ಜಲ್, ಶರಣಪ್ಪ ಆಮದಿಹಾಳ ಇತರರಿದ್ದರು.