ಶಾಲೆ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಿ

18 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಎನ್​.ಎ. ಮುತ್ತಣ್ಣ ಸ್ಮಾರಕ ಪೊಲೀಸ್​ ಮಕ್ಕಳ ವಸತಿ ಶಾಲೆಯು ಪೊಲೀಸ್​ ಇಲಾಖೆಯ ಅನ್ಯರ್ ರತ್ನವಾಗಿದೆ ಎಂದು ನಿವೃತ್ತ ಐಜಿಪಿ ಅಮರಕುಮಾರ ಪಾಂಡೆ ಹೇಳಿದರು.
ನಗರದ ಎನ್​.ಎ. ಮುತ್ತಣ್ಣ ಸ್ಮಾರಕ ಕರ್ನಾಟಕ ರಾಜ್ಯ ಪೊಲೀಸ್​ ಮಕ್ಕಳ ವಸತಿ ಶಾಲೆ ಹಳೇ ವಿದ್ಯಾಥಿರ್ಗಳ ಸಂದ ವತಿಯಿಂದ ಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಬೆಳ್ಳಿ ಮಹೋತ್ಸವ ಸಮಾರಂಭ, ಹಳೇ ವಿದ್ಯಾಥಿರ್ಗಳ ಮಿಲನ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆ ಅಭಿವೃದ್ಧಿಗೆ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ, ಶಿಕ್ಷಕರು, ಹಳೇ ವಿದ್ಯಾಥಿರ್ಗಳು ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. ಇಲಾಖೆಯ ಕಿರಿಯ ಹಂತದ ಸಿಬ್ಬಂದಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲು ಶಾಲೆ ಸ್ಥಾಪಿಸಲಾಗಿದೆ. ಐಎಎಸ್​, ಐಪಿಎಸ್​ ಹುದ್ದೆಗಳಲ್ಲಿ ಶಾಲೆ ಮಕ್ಕಳನ್ನು ನೋಡುವ ಮಹದಾಸೆ ಇದೆ. ಇದು ಸಾಕಾರವಾಗಲು ಶಾಲಾಡಳಿತ ಮಂಡಳಿ, ಶಿಕ್ಷಕರು ಮತ್ತು ಹಳೇ ವಿದ್ಯಾಥಿರ್ಗಳ ಸಂಘದ ಸದಸ್ಯರು ಇನ್ನಷ್ಟು ಶ್ರಮ ಹಾಕುವುದು ಅಗತ್ಯವಾಗಿದೆ ಎಂದರು.
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್​ ಮಾತನಾಡಿ, ಪೊಲೀಸ್​ ಮಕ್ಕಳ ವಸತಿ ಶಾಲೆಗೆ ಬೆಳವಣಿಗೆ ದೃಷ್ಟಿಯಿಂದ ಬರುವ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಥಿರ್ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಿದ್ದೇವೆ. ಹಳೇ ವಿದ್ಯಾಥಿರ್ಗಳ ಸಂದಿಂದ ಪ್ರತಿ ವರ್ಷ ಇಂತಹ ಸಮಾರಂಭ ಆಯೋಜಿಸಿ ವಿದ್ಯಾಥಿರ್ಗಳಿಗೆ ಪ್ರೋತ್ಸಾಹ ನೀಡಲಿ ಎಂದರು.
ಶಾಲೆ ಶಿಕ್ಷಕರಾದ ಆರ್​.ಎಸ್​. ದೇಶಪಾಂಡೆ, ಯು.ಬಿ. ಬದಾಮಿ, ಹಳೇ ವಿದ್ಯಾಥಿರ್ಗಳಾದ ಡಾ. ಅಂಬರೀಶ್​ ಅವಟೆ, ನಂದೀಶ ಸಿ., ಸಿದ್ದನಗೌಡ ಶಿವನಗೌಡರ ಮತ್ತು ವಿನೋದ ಕಲ್ಲಭಾವಿ ಅನಿಸಿಕೆ ಹಂಚಿಕೊಂಡರು.
ಶಾಲೆಯ 300ಕ್ಕೂ ಹೆಚ್ಚು ಹಳೇ ವಿದ್ಯಾಥಿರ್ಗಳು ತಮ್ಮ ಶಾಲಾ ದಿನಗಳ ಸಹಪಾಠಿಗಳನ್ನು ಕಂಡು ಪರಸ್ಪರ ಆರೋಗ್ಯ, ಕುಟುಂಬ ಮತ್ತು ಉದ್ಯೋಗದ ಕುರಿತು ವಿಚಾರಿಸಿ ಸಂಭ್ರಮಿಸಿದರು. ಶಾಲೆಯ ಆ ದಿನಗಳ ನೆನಪಿಗೆ ಜಾರಿದ ಹಳೇ ವಿದ್ಯಾಥಿರ್ಗಳು, ತಮ್ಮ ಅಂದಿನ ದಿನಚರಿ, ತುಂಟಾಟಗಳು ಹಾಗೂ ಪಾಠ ಪ್ರವಚನಗಳ ಬಗೆಗಿನ ಚರ್ಚೆ ನಡೆಸಿದರು.
ಹಳೇ ವಿದ್ಯಾಥಿರ್ಗಳ ಸಂದ ಅಧ್ಯಕ್ಷ ಶಿವಾನಂದ ಜೋಡಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಪ್ರಾಚಾರ್ಯ ಎಸ್​.ಒ. ಬಿರಾದಾರ, ಪಿ.ಡಿ. ರೋಣದ, ವಿ.ಎಸ್​. ಪಾಟೀಲ, ಅಲ್ಲಯ್ಯನವರಮಠ, ಶಿಕ್ಷಕರು, ವಿದ್ಯಾಥಿರ್ಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net