

ಮಧುಗಿರಿ: ಅಂಗನವಾಡಿ ಕೇಂದ್ರಗಳ ವಿಷಯದಲ್ಲಿ ತುಮಕೂರು ಜಿಲ್ಲೆಯನ್ನು ಮಾದರಿಯನ್ನಾಗಿ ಮಾಡಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ.ಸಿದ್ದರಾಮಣ್ಣ ತಿಳಿಸಿದರು.
ತಾಲೂಕು ಪಂಚಾಯಿತಿ ಮುಂಭಾಗ ತಾಲೂಕು ಅಡಳಿತ, ತಾಪಂ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಸಹಯೋಗದೊಂದಿಗೆ ಮಧುಗಿರಿ ತಾಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುವ ಮಿಂಚನ ಸಂಚಾರ ಅಭಿಯಾನ ಮತ್ತು ಪುಟಾಣಿ ನಡೆ ಅಂಗನವಾಡಿ ಕಡೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಗನವಾಡಿ ಕೇಂದ್ರಗಳಿಗೆ ಭೇಟಿ ಕೊಡುವುದರಿಂದ ಅಂಗನವಾಡಿಗಳಲ್ಲಿನ ಸಮಸ್ಯೆ ಬಗೆಹರಿಸಲು ಸಹಾಯವಾಗುತ್ತದೆ. ಅಭಿಯಾನದಲ್ಲಿ ಅಧಿಕಾರಿಗಳು ಟೀಮ್ ಆಗಿ ಕೆಲಸ ಮಾಡಬೇಕು. ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಮೇಲ್ವಿಚಾರಕರ ಸಭೆ ನಡೆಸಿ, ಅವರ ಕುಂದು&ಕೊರತೆ ಬಗೆಹರಿಸಲು ಶ್ರಮಿಸಬೇಕು. ತುಮಕೂರು ಜಿಲ್ಲೆಯಲ್ಲಿ ಶೇ.90 ಅಂಗನವಾಡಿ ಕೇಂದ್ರಗಳಿಗೆ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದರು.
ಮಿಂಚಿನ ಸಂಚಾರ ಕಾರ್ಯಕ್ರಮದಿಂದ ಅಂಗನವಾಡಿಗಳಿಂದ ಹೊರಗುಳಿದಿರುವ ಮಕ್ಕಳನ್ನು ಮತ್ತೆ ಅಂಗನವಾಡಿಗೆ ಕರೆತರಲು ಅನುಕೂಲವಾಗುತ್ತದೆ. ಅಲ್ಲದೆ ಇಲಾಖೆಯ ಕಾರ್ಯಕ್ರಮಗಳಾದ ಮಾತೃ ವಂದನ, ಭಾಗ್ಯಲಕ್ಷಿ$್ಮ, ಕೌಟುಂಬಿಕ ದೌರ್ಜನ್ಯ ಕಾಯ್ದೆ ಮುಂತಾದ ಯೋಜನೆಗಳನ್ನು ಜನತೆಗೆ ತಿಳಿಸಲು ಮತ್ತು ಅರಿವು ಮೂಡಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಸಿಡಿಪಿಒಗಳಾದ ಕುಮಾರ್ ನಾಯಕ್, ಕಮಲಮ್ಮ, ಶಶಿಧರ, ಅಭಿಲಾಷ್, ದೀಪಾ, ಹೆಬ್ಬಳ್ಳಿ ಗಂಗಾಧರ, ಕೃಷ್ಣಮೂರ್ತಿ, ಹೊನ್ನಪ್ಪ, ಎಸಿಡಿಪಿ ನಾಗಭೂಷಣ, ಕರಿಬಸವಯ್ಯ, ಜಿಲ್ಲೆಯ ಎಲ್ಲ ಎಸಿಡಿಪಿಗಳು, ಮೇಲ್ವಿಚಾರಕರು, ಹಿರಿಯ ಮೇಲ್ವಿಚಾರಕರು ಇದ್ದರು.