ಅಪಾರ್ ಐಡಿ ನೋಂದಣಿಗೆ ಶ್ರಮವಹಿಸಿ

Work hard to register for Apar ID
ನಾಗರಬೆಟ್ಟದ ಮಠ ಪ್ರೌಢಶಾಲೆಯಲ್ಲಿ ಗುರುವಾರ ವಲಯಮಟ್ಟದ ಮುಖ್ಯಗುರುಗಳ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಮಾತನಾಡಿದರು. ಯು.ಬಿ. ಧರಿಕಾರ, ಎಂ.ಎಂ.ಬೆಳಗಲ್ ಮತ್ತಿತರರಿದ್ದಾರೆ.
Published on

ನಾಲತವಾಡ: ವಿದ್ಯಾರ್ಥಿಗಳ ಶೈಕ್ಷಣಿಕ ಕ್ರೆಡಿಟ್‌ಗಳು ಮತ್ತು ಸರ್ಟಿಫಿಕೆಟ್‌ಗಳನ್ನು ಸುರಕ್ಷಿತವಾಗಿಡಲು ಕೇಂದ್ರ ಸರ್ಕಾರದ ಅಪಾರ್ ಐಡಿ ಕಡ್ಡಾಯವಾಗಿ ಮಾಡಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಹೇಳಿದರು.

ನಾಗರಬೆಟ್ಟದ ಮಠ ಪ್ರೌಢಶಾಲೆಯಲ್ಲಿ ಗುರುವಾರ ವಲಯ ಮಟ್ಟದ ಮುಖ್ಯಗುರುಗಳ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಅಪಾರ್ ಕಾರ್ಡ್‌ನಲ್ಲಿ ಯೂನಿಕ್ ಯೂಸರ್ ಅಪಾರ್ ಐಡಿ ನೀಡಲಾಗುತ್ತದೆ. ಅಪಾರ್‌ನಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ವಿದ್ಯಾರ್ಥಿ ವರ್ಗಾವಣೆ ಸಮಯದಲ್ಲಿ ಅನುಕೂಲವಾಗುತ್ತದೆ. ಇದರಿಂದ ದಾಖಲೆಗಳು ಮತ್ತು ಸರ್ಟಿಫಿಕೆಟ್‌ಗಳ ಭೌತಿಕ ವರ್ಗ ಕಾರ್ಯ ನಿಲ್ಲಲ್ಲಿದೆ. ಈ ವ್ಯವಸ್ಥೆ ಡಿಜಿ ಲಾಕರ್ ಜತೆ ಸಂಯೋಜನೆಯಾಗಿದೆ. ಅಗತ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ತಾಲೂಕಿನ ಅಪಾರ್ ಪ್ರಗತಿ ತೀರಾ ಕಡಿಮೆ ಇದ್ದು, ಶಿಕ್ಷಣ ಇಲಾಖೆಯ ಎಲ್ಲರೂ ಕೈಜೋಡಿಸಬೇಕು. ನಿಷ್ಕಾಳಜಿ ವಹಿಸುವವರ ವೇತನ ತಡೆಹಿಡಿಯಲಾಗುವುದು ಎಂದು ಎಚ್ಚರಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ಧರಿಕಾರ ಮಾತನಾಡಿ, ಪ್ರತಿ ಶಾಲೆ ಮಕ್ಕಳ ಅಪಾರ್ ಪ್ರಗತಿ ಪರಿಶೀಲನೆ ನಡೆಸಿ, ಚುರುಕಾಗಿ ಕೆಲಸ ಮಾಡಲು ಶಿಕ್ಷಕರಿಗೆ ಸೂಚಿಸಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ ಹಾಲಿನ ಪೌಡರ್ ಪ್ಯಾಕೆಟ್ ಮೇಲಿನ ಸಂಖ್ಯೆ ಬರೆದಿಟ್ಟುಕೊಳ್ಳುವುದು ಹಾಗೂ ಪೌಡರ್ ಅಪವ್ಯಯ ಆಗದಂತೆ ನೋಡಿಕೊಳ್ಳಬೇಕು ಎಂದರು. ವೀರೇಶ ಪೋಲೇಸಿ ಶಾಲಾ ಅನುದಾನ ಬಳಕೆ ಮಾಹಿತಿ ತಿಳಿಸಿದರು.

ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ದುಂಡಪ್ಪ ವಡಜೆ, ಜಿ.ಎಂ.ಗುಳಗಿ, ಎಲ್.ಎಸ್. ನಾಯಕ, ಎ.ಬಿ.ಬಗಲಿ, ಸಿದ್ದನಗೌಡ ಬಿಜ್ಜೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net